ಡಾ ಶಾರದಾಮಣಿ ಹುನಶಾಳ-ಉಸಿರಾಗಿ ನಿಲ್ಲುವನು..

ಕಾವ್ಯ ಸಂಗಾತಿ

ಡಾ ಶಾರದಾಮಣಿ ಹುನಶಾಳ-

ಉಸಿರಾಗಿ ನಿಲ್ಲುವನು..

ಮೂಡಣದಿ ದಿನಕರನು
ನಸುನಗೆಯ ಬೀರುತಲಿ..
ಕವಿದ ಮಂಜಿನ ಮುಸುಕ
ಸರಿಸಿ ಬರುತಿಹನು.
ಬಾನಲ್ಲಿ ನಸುಗೆಂಪ
ಬಣ್ಣದೋಕುಳಿ ಹರಿಸಿ..
ಹೊನ್ನಕಿರಣದಿ ಜಗದ
ಬಾಳನ್ನು ಬೆಳಗುವನು..

ಕವಿದ ಕತ್ತಲೆಯನ್ನು
ಬದಿಗೊತ್ತಿ ಸಂಭ್ರಮದಿ
ಜೀವ ಸಂಕುಲಕ್ಕೆಲ್ಲ
ಜೀವಕಳೆ ತುಂಬುವನು..
ಸೃಷ್ಟಿಯ ಕಣಕಣದಿ
ಚಿತನ್ಯವನು ಸ್ಪುರಿಸಿ
ನವಜೀವ ಕಾವ್ಯಕ್ಕೆ
ಮುನ್ನುಡಿಯ ಬರೆಯುವನು.
ಅಂಧಕಾರದ ಜೊತೆಗೆ
ಹೋರಾಟ ನಡೆಸುತಲಿ…..
ನೊಂದವರ ಭರವಸೆಯ
ಉಸಿರಾಗಿ ನಿಲ್ಲುವನು..
ಬಾನ ಕನ್ಯೆಯ ಕೆನ್ನೆಯನು
ರಂಗೀರಿಸಿ,

.


ಮುಗಿಲ ಅಂಚಿನ ಗುಂಟ
ಚಿತ್ತಾರ ಬಿಡಿಸುವನು.
ಜೀವನೌನ್ನತ್ಯವನು.
ಅನುಗಾಲ ಸಾರುತಲಿ….
ಏರುವನು ಭಾಸ್ಕರನು
ಬಸವ ನಾಮ ಸ್ಮರಿಸಿ…
ಮೇಲು ಕೀಳೆಂಬ
ಭೇಧವನು ತಾ ಮರೆಸಿ……
ಪಡುವಣದ ಮಡಿಲಿನಲಿ
ನಸುನಗುತ ಜಾರುವನು…


About The Author


Comments

4 responses to “ಡಾ ಶಾರದಾಮಣಿ ಹುನಶಾಳ-ಉಸಿರಾಗಿ ನಿಲ್ಲುವನು..”

  1. ಭುವನೇಶ್ವರಿ ಟೊಂಗಳೆ Avatar
    ಭುವನೇಶ್ವರಿ ಟೊಂಗಳೆ

    ದಿನಕರನ ಮನೋಹರವಾದ ವರ್ಣನೆ

    1. Dr.Sharadamani.Hunashal Avatar
      Dr.Sharadamani.Hunashal
    2.  Avatar
      Anonymous

      ಧನ್ಯವಾದ ಭುವನೇಶ್ವರಿ ಸಹೋದರಿ ಅವರಿಗೆ.

  2. Vishwanath Patil Avatar
    Vishwanath Patil

    ಅರ್ಥಪೂರ್ಣ ಕವನ

Leave a Reply

You cannot copy content of this page