ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಕನಸುಗಳೆ ಹೀಗೆ.
ಕನಸುಗಳೆ ಹೀಗೆ
ರೊಕ್ಕ ರೂಪಾಯಿ ವಶೀಲಿ
ಇಲ್ಲದೆ ಪುಕ್ಕಟೆ ಮನರಂಜಿಸ್ತಾವ
ಆಶಾಗೋಪುರ ಕಟ್ಟಿಸ್ತಾವ
ಕನಸುಗಳೆ ಹೀಗೆ
ಕೈಬೀಸಿ ಕರಿತಾವ
ಕಾಣಲು ಹೋದಾಗ
ಮರೀಚಿಕೆ ಆಗ್ತಾವ
ಕನಸುಗಳೆ ಹೀಗೆ
ಬುಧ್ಧ ಬಸವ ಅಕ್ಕರಂತೆ
ಮೆರೆಯಲು ಸೋಗು ಹಾಕ್ತಾವ
ಸಾಕಾರಗೊಳ್ಳಲು
ಹಿಂದೆಬಿಳ್ತಾವ
ಕನಸುಗಳೆ ಹೀಗೆ
ಏನೂ ಇಲ್ಲದೆ ಬಂದುಕಾಡ್ತಾವ
ಮನದಲಿ ಮನೆ ಮಾಡಿಕೊರಿತಾವ
ಮಮ್ಮಲ ಮರುಗಿ
ಮುದುಡಿ ಬಿಡ್ತಾವ
ಹಾಗಂತ ಯಾರ್ ಕಂಡಿಲ್ಲ
ಕನಸಾ?
ಎಷ್ಟ್ ಆಗ್ಯಾವ ನನಸಾ
ಇರುಳ ಕನಸ ಕಾಣೋದು
ತಪ್ಪೇನಲ್ಲ
ಕಂಡ ಕನಸ ಸಾಕಾರಗೊಳ್ಳೊದು ಅಪರೂಪ ಹೌದಲ್ಲ?
ಕನಸುಗಳೆ ಹೀಗೆ.
ಲಲಿತಾ ಪ್ರಭು ಅಂಗಡಿ.