ಡಾ ಶಾರದಾಮಣಿ ಹುನಶಾಳ-ಉಸಿರಾಗಿ ನಿಲ್ಲುವನು..

ಕಾವ್ಯ ಸಂಗಾತಿ

ಡಾ ಶಾರದಾಮಣಿ ಹುನಶಾಳ-

ಉಸಿರಾಗಿ ನಿಲ್ಲುವನು..

ಮೂಡಣದಿ ದಿನಕರನು
ನಸುನಗೆಯ ಬೀರುತಲಿ..
ಕವಿದ ಮಂಜಿನ ಮುಸುಕ
ಸರಿಸಿ ಬರುತಿಹನು.
ಬಾನಲ್ಲಿ ನಸುಗೆಂಪ
ಬಣ್ಣದೋಕುಳಿ ಹರಿಸಿ..
ಹೊನ್ನಕಿರಣದಿ ಜಗದ
ಬಾಳನ್ನು ಬೆಳಗುವನು..

ಕವಿದ ಕತ್ತಲೆಯನ್ನು
ಬದಿಗೊತ್ತಿ ಸಂಭ್ರಮದಿ
ಜೀವ ಸಂಕುಲಕ್ಕೆಲ್ಲ
ಜೀವಕಳೆ ತುಂಬುವನು..
ಸೃಷ್ಟಿಯ ಕಣಕಣದಿ
ಚಿತನ್ಯವನು ಸ್ಪುರಿಸಿ
ನವಜೀವ ಕಾವ್ಯಕ್ಕೆ
ಮುನ್ನುಡಿಯ ಬರೆಯುವನು.
ಅಂಧಕಾರದ ಜೊತೆಗೆ
ಹೋರಾಟ ನಡೆಸುತಲಿ…..
ನೊಂದವರ ಭರವಸೆಯ
ಉಸಿರಾಗಿ ನಿಲ್ಲುವನು..
ಬಾನ ಕನ್ಯೆಯ ಕೆನ್ನೆಯನು
ರಂಗೀರಿಸಿ,

.


ಮುಗಿಲ ಅಂಚಿನ ಗುಂಟ
ಚಿತ್ತಾರ ಬಿಡಿಸುವನು.
ಜೀವನೌನ್ನತ್ಯವನು.
ಅನುಗಾಲ ಸಾರುತಲಿ….
ಏರುವನು ಭಾಸ್ಕರನು
ಬಸವ ನಾಮ ಸ್ಮರಿಸಿ…
ಮೇಲು ಕೀಳೆಂಬ
ಭೇಧವನು ತಾ ಮರೆಸಿ……
ಪಡುವಣದ ಮಡಿಲಿನಲಿ
ನಸುನಗುತ ಜಾರುವನು…


4 thoughts on “ಡಾ ಶಾರದಾಮಣಿ ಹುನಶಾಳ-ಉಸಿರಾಗಿ ನಿಲ್ಲುವನು..

  1. ದಿನಕರನ ಮನೋಹರವಾದ ವರ್ಣನೆ

Leave a Reply

Back To Top