ಮಕ್ಕಳಪದ್ಯಗಳು
ಅರುಣ ರಾವ್
ಕೈತುತ್ತು
ಎಷ್ಟು ಸವಿಯದು
ಏನು ರುಚಿಯದು
ಅಮ್ಮನು ಹಾಕುವ ಕೈತ್ತುತ್ತು
ಒಂದೊಂದು ತುತ್ತಲ್ಲಿ
ಅಡಗಿದೆ ನೋಡು
ಸಾವಿರ ಕರಿಗಳ ತಾಕತ್ತು
ಸೊಪ್ಪಿನ ಸಾರು
ಕೆಂಪಕ್ಕಿ ಅನ್ನ
ನನಗೆ ತುಂಬಾ ಫೆವರೇಟು
ಕೈ ತುತ್ತು ಊಟ
ತಿಂದರೆ ಸಿಗುವ
ಮಜವದು ಬಹಳ ಗಮ್ಮತ್ತು
ಸಂಡಿಗೆ ಹಪ್ಪಳ
ನಂಜಿಕೊಳ್ಳುತ
ಹರಟೆ ಹೊಡೆಯಲು ಖುಷಿಯಿತ್ತು
ಬೆಳದಿಂಗಳ ರಾತ್ರಿ
ಛಾವಣಿ ಮೇಲೆ
ಕುಳಿತು ಮೆದ್ದರೆ ಚೆನ್ನಾಯ್ತು
ಎಲ್ಲರೂ ಒಂದಡೆ
ಸೇರಿ ಹರಟಲು
ಕೈತುತ್ತು ಒಂದು ನೆಪವಾಯ್ತು
ಮಕ್ಕಳ ಮೇಲಿನ
ಪ್ರೀತಿ ವಾತ್ಸಲ್ಯಕ್ಕೆ
ಇದುವೆ ಅಂದದ ಕುರುಹಾಯ್ತು
————————————-
ಉತ್ತಮ ಕವನ ಮಕ್ಕಳಿಗಾಗಿಯೇ ಅನುಕೂಲಕರ