ಬಸವ ಜಯಂತಿಯ ವಿಶೇಷ

ವೈ.ಎಂ.ಯಾಕೊಳ್ಳಿ

ಬಸವ‌ಬೆಳಗಿನ ಹೈಕುಗಳು

ಬಸವ ನಾಮ
ಜಗಕೆ ಧ್ಯಾನ ನಿತ್ಯ
ಅನುರಣನ

ಬೆಳಗಿನೊಳು
ಬೆಳಕು ಬಸವನಾ
ಶುಭ ಬೆಳಕು

ಕಾಯಕವನೆ
ನೀಡಿ ನಾಯಕರಹ
ದಾರಿ ಸಲೀಸು

ದುಡಿಯದಿಹ
ಜನ್ಮ ವ್ಯರ್ಥವೆಂದರು
ಸದಾ ತಾ ಸಾಕ್ಷಿ

ಎಲ್ಲ ಎಲ್ಲವು
ಒಂದೆ ಲೋಕವೆಲ್ಲವು
ತಂದೆ ತಾಯಿಯು

ಕಕ್ಕಯ್ಯ ಚೆನ್ನ
ಅಣ್ಣಯ್ಯ ತಮ್ಮ ಎಲ್ಲ
ಒಂದಾಗಿ ಬಾಳ್ವೆ

ಹೆಣ್ಣು ಹೆಣ್ಣಲ್ಲ
ಜಗದ ಕಣ್ಣೆಂದರಲ್ಲಿ
ಲೋಕ ಹೊತ್ತಳು

ತಾಯಿ ತಂಗಿಯು
ಮಗಳು ಮಡದಿಯು
ಕೀಳಲ್ಲ ಮೇಲು

ಶರಣ ಜನ
ಬರವು ಕಲ್ಯಾಣದೊಳು
ನೆರವಿ ತುಂಬಿ

ಕಲ್ಯಾಣವೆಲ್ಲಿ
ಅಲ್ಲೆಲ್ಕೊ ಇಲ್ಲ ಇಲ್ಲಿ
ಎಲ್ಲೆಲ್ಲೂ ತಾನು


Leave a Reply

Back To Top