ಬಸವ ಜಯಂತಿಯ ವಿಶೇಷ

ಲಕ್ಷ್ಮೀದೇವಿ ಪತ್ತಾರ

ಜಗಜ್ಯೋತಿ ಬಸವಣ್ಣ

ಭಕ್ತಿಗೆ ಭಂಡಾರ ಜ್ಞಾನಕ್ಕೆ ಮೇರು ಶಿಖರ ಅಣ್ಣ ಬಸವಣ್ಣ

ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಸದ್ವಿಚಾರ
ಉನ್ನತ ಪದವಿ ,ಅಪಾರ ಐಸಿರಿ
ಒಡೆಯ ತಾನಾದರೂ ತಲೆಗೇರದ ಅಹಂಕಾರ ಕೆಳಗಿದ್ದವರ ಕೈ ಹಿಡಿದು ಮೇಲೆತ್ತಿದ ಕರುಣಾಸಾಗರ ಅಣ್ಣ ಬಸವಣ್ಣ

ಬೇದ ಭಾವದ ಕಸಗೂಡಿಸಿ
ಸಮ ಸಮಾಜದ ತಂಗಾಳಿ ಬಿಸಿ
ಮನುಷ್ಯತ್ವ ಮೆರಿಸಲು ಭುವಿಯ ಸ್ವರ್ಗ ಮಾಡಲು ಬಂದ ಅಣ್ಣ ಬಸವಣ್ಣ

ಅಂತರಂಗ ಬಹಿರಂಗ ಶುದ್ಧಿಗೆ
ಸಿದ್ಧಸೂತ್ರವ ಮಾಡಿ
ಸಾಧು ಸಜ್ಜನರಾಗಿ ಬಾಳಿ
ಮಹಾದೇವನೊಲಿಸಿಕೊಳ್ಳುವ ಪರಿ
ತೋರಿದ ಅಣ್ಣ ಬಸವಣ್ಣ

ತನ್ನಂತೆ ಪರರೆಂದು ಬಗೆದು
ಮೇಲು-ಕೀಳುಗಳ ತಡೆಗೋಡೆ ಒಡೆದು
ಪ್ರತಿ ಕಾಯಕದಲ್ಲೂ ಪರಮಾತ್ಮನ ಕಂಡು ಆತ್ಮೋದ್ದಾರದ ಮಾರ್ಗ ತೋರಲು ಬಂದ ಅಣ್ಣ ಬಸವಣ್ಣ

ಶೋಷಣೆಯ ಮುಳ್ಳುಗಳ ಕಿತ್ತೆ
ತ್ಯಾಗ, ಪ್ರೀತಿಯ ಹಸಿರು ಹುಲ್ಲಿನ
ಹಾದಿ ನೀ ತಂದೆ
ಮನುಷ್ಯತ್ವದಲ್ಲಿ ಈಶತ್ವ ಕಂಡೆ
ಕಾಯಕದಲ್ಲಿ ಕೈಲಾಸ ತೋರಿ
ಸುಖೀ ಸಮೃದ್ಧಿ ಸಮಾಜದ ಹರಿಕಾರ
ನೀನಾದೆ ಅಣ್ಣ ಬಸವಣ್ಣ

ನೀ ಕಿತ್ತು ಹಾಕಿದ ತಾರತಮ್ಯದ
ಕಸ ಮತ್ತೆ ಹುಟ್ಟಿಕೊಂಡಿದೆ
ಅಜ್ಞಾನ ಮೌಢ್ಯತೆಯ ಅಂಧಕಾರದ ಮತ್ತೆ ಮತ್ತೆ ಕವಿಯುತ್ತಿದೆ
ಜನರ ಮನ ಶುಚಿಗೊಳಿಸಲು
ಶಾಂತಿ ಪ್ರೀತಿ ಯ ಜ್ಯೋತಿ ಬೆಳಗಲು
ಮತ್ತೆ ಹುಟ್ಟಿ ಬರಬೇಕು ಜಗಜ್ಯೋತಿ ಅಣ್ಣ ಬಸವಣ್ಣ


Leave a Reply

Back To Top