ಅಂಕಣ ಸಂಗಾತಿ
ಅಮೃತ ವಾಹಿನಿಯೊಂದು
ಅಮೃತಾ ಮೆಹೆಂದಳೆ
ಸಾವುನೋವನು ಮೀರುವಂತೆ ಅಪ್ಪಿಕೋ ನೀನು..
ಮುಝಕೋ ಅಪ್ನೆ ಗಲೆ ಲಗಾಲೋ
ಏ ಮೇರೆ ಹಮ್ ರಾಹೀ
ತುಮ್ ಕೋ ಕ್ಯಾ ಬತ್ ಲಾವೂ ಮೆ
ಕೆ ತುಮ್ಸೆ ಕಿತನಾ ಪ್ಯಾರ್ ಹೆ..
ನಿನ್ನ ಮೇಲಿನ ಪ್ರೀತಿಯನ್ನು ಹೇಳಲು ನನ್ನಿಂದಾಗುವುದಿಲ್ಲ. ಮಾತುಗಳಿಗೆ ನಿಲುಕುವುದಲ್ಲವೇ ಅಲ್ಲ ಅದು. ಆದರೂ ಒಮ್ಮೆ ನನ್ನ ನಿನ್ನ ಬಾಹುಗಳಲ್ಲಿ ಬಂಧಿಸು. ಆಗ ನಿನಗೆ ತಿಳಿಯಬಹುದು ಅದರ ಅಗಾಧತೆ. ನೀನು ನನಗೆ ಸಿಕ್ಕಾಗಲಷ್ಟೇ ನನ್ನ ನೋವುಗಳೆಲ್ಲ ಮಾಯವಾಗುವುದು. ನಿನ್ನಪ್ಪುಗೆಯೇ ಮದ್ದಾಗುವುದು, ಮುದ್ದಾಗುವುದು. ಇಲ್ಲದಿದ್ದರೆ ಜೀವನವೆಲ್ಲಾ ಏಕಾಂಗಿತನವೇ ಎನ್ನಿಸಿಬಿಡುವುದು. ಹತ್ತಿರವಾಗೇ ಇದ್ದು ನನ್ನನ್ನು ನೀನು ಸಂಭಾಳಿಸಲೇಬೇಕಿದೆ ಇನ್ನು!
ಜಬ್ ತುಮ್ ಮುಝಸೆ ಮಿಲ್ ಜಾತೇ ಹೋ
ದರ್ದ್ ದವಾ ಬನ್ ಜಾತಾ ಹೆ
ವರ್ನಾ ತುಮ್ ಬಿನ್ ಸಾರಾ ಜೀವನ್
ಸೂನಾಪನ್ ಕೆಹೆಲಾತಾ ಹೆ
ಹರ್ ಮಂಝಿಲ್ ಪರ್
ಮುಝಕೋ ಸಂಭಾಲೋ…
ಜಗದ ಗೊಂದಲ ಬೇಡ ನಿನಗೆ
ಎದೆಯ ಹಾಡು ನೀನು ನನಗೆ
ನಿನ್ನ ಮಾತೇ ಜೇನು ನನಗೆ
ನಿನ್ನ ಜೊತೆಯೇ ಸಾಕು ನನಗೆ
ಪ್ರಪಂಚ ಅದರ ಪಾಡಿಗಿರಲಿ. ನಮಗೇಕೆ ಅದರ ಗೊಡವೆ? ಜೀವರಾಗವೇ ನೀನು. ನಿನ್ನ ಮಾತೇ ಜೇನು. ನಿನ್ನ ಜೊತೆಯೇ ಸಾಕಿನ್ನು. ಜಗತ್ತಿನ ಎಲ್ಲಾ ಚೆಲುವನ್ನೂ ತುಂಬಿಕೊಳ್ಳೋಣ. ಸಂಕಟವನ್ನೆಲ್ಲ ಮರೆತು ಸಾವನ್ನು ನೋವನ್ನು ಮರೆತುಬಿಡೋಣ. ಒಮ್ಮೆ ನನ್ನ ತಬ್ಬಿಕೋ ಮತ್ತು ಜೀವನಪೂರ್ತಿ ಬಿಡಲಾಗದಂತೆ ಅಪ್ಪಿಕೋ ಸಾಕು..
ಬರುವ ಸಂಕಟ ಎಲ್ಲಾ ಮರೆತು
ಸಾವು ನೋವನು ಮೀರಬೇಕು
ಅಪ್ಪಿಕೋ ಎನ್ನ ಅಪ್ಪಿಕೋ…
ಕಭಿ ಕಭಿ ಕುಛ್ ತೋ ಕಹೋ ಪಿಯಾ ಹಮ್ಸೆ
ಯೆ ಕಮ್ ಸೆ ಕಮ್ ಆಜ್ ತೋ ಖುಲ್ ಕೆ
ಮಿಲೋ ಝರಾ ಹಮ್ ಸೆ..
ಇನ್ನಾದರೂ ಮಾತಾಡು ಮನಸ್ಸಿನ ಮಾತನ್ನು. ಆಗಾಗ ಏನಾದರೂ ಹೇಳುತ್ತ ಇದ್ದುಬಿಡು. ಇಂದಾದರೂ ಮುಕ್ತವಾಗಿ ನನ್ನ ಸೇರಿಬಿಡು. ಈಗ ಸಿಕ್ಕಿರುವ ಈ ಸಮಯ ನಮ್ಮದು. ಇನ್ನು ಭಯವಾದರೂ ಏಕೆ? ನನ್ನ ಬಿಟ್ಟು ಹೋಗುವುದೇ ಆಗಿದ್ದರೆ, ನನ್ನ ಕೈಯನ್ನು ನೀನು ಹಿಡಿದಿದ್ದಾದರೂ ಯಾಕೆ? ಒಮ್ಮೆ ಒಪ್ಪಿಕೊಂಡ ಮೇಲೆ ಬಿಡುವ ಮಾತಾದರೂ ಯಾಕೆ? ತನ್ನವರಾದವರನ್ನು ಯಾರಾದರೂ ದೂರ ಮಾಡುತ್ತಾರಾದರೂ ಯಾಕೆ?
ಚಲೆ ಹಿ ಜಾನಾ ಹೆ ನಝರ್ ಚುರಾಕೆ ಯೂ
ಫಿರ್ ಥಾಮೀಥಿ ಸಾಜನ್ ತುಮ್ನೆ
ಮೇರಿ ಕಲಾಯಿ ಕ್ಯೂ
ಕಿಸೀಕೋ ಅಪ್ನಾ ಬನಾಕೆ ಛೋಡ್ ದೇ
ಐಸಾ ಕೋಯಿ ನಹಿ ಕರ್ ತಾ..
ಜಬ್ ತುಮ್ ಮುಝಸೆ ದೂರ್ ರೆಹೆತೆ ಹೋ
ಜಿಯಾ ಮೇರಾ ಘಬರಾತಾ ಹೆ
ನೀಂದ್ ಆಂಖೋಂಸೆ ಉಡ್ ಜಾತಿ ಹೆ
ಚಾಂದ್ ಅಗನ್ ಬರ್ಸಾತಾ ಹೆ..
ನೀನು ದೂರವಿದ್ದಾಗ ಭಯವಾಗುತ್ತದೆ, ಆತಂಕವಾಗುತ್ತದೆ. ನಿದ್ದೆ ಹಾರಿಹೋಗುತ್ತದೆ. ಬೆಳದಿಂಗಳೂ ಬೆಂಕಿಯಂತೆ ಸುಡುತ್ತದೆ. ನೀರಿನಿಂದ ಹೊರಗೆ ಬಿದ್ದ ಮೀನಿನ ರೀತಿ ಜೀವ ಚಡಪಡಿಸುತ್ತದೆ. ಈ ನಿನ್ನ ಪ್ರೀತಿ ತಳಮಳಗೊಳಿಸಿಬಿಡುತ್ತದೆ. ಓಹ್, ಈ ಚಡಪಡಿಕೆಯಿಂದ, ಗೊಂದಲಗಳಿಂದ ನನ್ನ ಉಳಿಸಿಬಿಡು. ಬಿಗಿಯಾದ ಬಂಧನದಲ್ಲೆನ್ನ ಬಂಧಿಸಿಬಿಡು..
ಇಸ್ ಉಲ್ಝನ್ ಸೆ ಮುಝಕೋ ಬಚಾಲೋ
ಏ ಮೇರೆ ಹಮ್ ರಾಹಿ..
ನನ್ನ ತೋಳಿನಲ್ಲಿ ನೀನು
ಇದ್ದ ಮೇಲೆ ಭೂಮಿ ಬಿರಿಯಲಿ
ಒಂದು ಹೊತ್ತು ನಿನ್ನ ಮುತ್ತು
ಸಿಕ್ಕ ಮೇಲೆ ಪ್ರಳಯವಾಗಲಿ..
ನಮ್ಮ ಪ್ರೇಮಲೋಕದಲ್ಲಿ ಮೇಲುಕೀಳಿಲ್ಲ. ಜಾತಿಗೊಂದಲವಿಲ್ಲ. ಭೂಮಿ ಬಿರಿದರೂ ಭಯವಿಲ್ಲ. ಪ್ರಳಯವಾದರೂ ಪ್ರಣಯಕ್ಕೆ ಕೊರತೆಯಿಲ್ಲ. ನೀನು ತಬ್ಬಿರುವಾಗ ಭಯವಿಲ್ಲ. ನಿನ್ನ ಮುತ್ತಿನ ಮತ್ತಲ್ಲಿ ಚಿಂತೆಗಳಿಲ್ಲ.
ನೂರು ಮುತ್ತನು ಕೊಟ್ಟು ನಿನಗೆ
ನಾನು ಆಗುವೆ ಕಣ್ಣು ನಿನಗೆ
ಬಾಳೆಲ್ಲಾ ಎನ್ನ ತಬ್ಬಿಕೋ
ಗೆಳತಿ ಓ ಗೆಳತಿ..
ನಮ್ಮ ಮಿಲನ ಇಂದು ನಿನ್ನೆಯದೆಂದು ತಿಳಿದಿರುವೆಯಾ? ಊಹೂಂ, ಖಂಡಿತ ಅಲ್ಲ. ಇದು ಈ ಜನುಮದ, ಜನ್ಮಜನ್ಮಾಂತರದ ಸಂಬಂಧ. ಹಾಗಿದ್ದ ಮೇಲೆ ಮುಚ್ಚುಮರೆಯೇಕೆ ನಮ್ಮ ನಡುವೆ? ನಿನ್ನೆಲ್ಲಾ ಗುಟ್ಟುಗಳನ್ನು ಬಿಟ್ಟು, ಅಹಮಿಕೆಯನ್ನು ಸುಟ್ಟು, ನಿನ್ನ ತೋಳಲ್ಲಿ ನನ್ನ ಬಂಧಿಸಿಬಿಡು..
ಬಾಹೋಮೆ ಚಲೆ ಆವೋ
ಹಮ್ಸೆ ಸನಮ್ ಕ್ಯಾ ಪರದಾ
ಯೆ ಆಜ್ ಕಾ ನಹಿ ಮಿಲನ್
ಯೆ ಸಂಗ್ ಹೆ ಉಮರ್ ಭರ್ ಕಾ…
ಅಮೃತಾ ಮೆಹೆಂದಳೆ
2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ
Beautiful