ಬಸವ ಜಯಂತಿ ವಿಶೇಷ

ಆದಪ್ಪ ಹೆಂಬಾ ಮಸ್ಕಿ

ನಕ್ಕೊಮ್ಮೆ ದಾರಿಬಿಡಿ

ಅವನಾರವ ಅವನಾರವ
ಎನ್ನದಿರಯ್ಯಾ
ಇಂವ ನಮ್ಮವ
ಇಂವ ನಮ್ಮವ
ಎನ್ನಿರೆಂದ ಬಸವ
ಬಸವನೇ ನಮ್ಮವನು
ನಿಮ್ಮವನಲ್ಲ
ವಿಭೂತಿ ಇಷ್ಟಲಿಂಗವೆಲ್ಲವೂ ನಮ್ಮವೇ ನಿಮ್ಮವಲ್ಲ
ಎನ್ನುವ ಪ್ರಭೂತಿಗಳು ಬರುತ್ತಿದ್ದಾರೆ
ನಕ್ಕೊಮ್ಮೆ ದಾರಿಬಿಡಿ ||

ದೇವರು ಗುಡಿಯೊಳಗಿಲ್ಲ
ನಿನ್ನ ದೇಹವೇ ದೇಗುಲ
ಎಂದನು ಬಸವ
ಹೌದಾ ಆಯ್ತು ತಂದೆ
ನಿನ್ನದೇ ಮೂರ್ತಿ ಮಾಡುತ್ತೇವೆ
ಜೊತೆಗೆ ನಿನಗೊಂದು ಗುಡಿ
ಅಳಿವಿರದ ಜಂಗಮನ
ಸ್ಥಾವರವ ಮಾಡಿದ
ಪ್ರಭೂತಿಗಳು ಬರುತ್ತಿದ್ದಾರೆ
ನಕ್ಕೊಮ್ಮೆ ದಾರಿಬಿಡಿ ||

ಜಾತಿ ಮತ ಪಂಥಗಳು
ಬೇಡಾ ಎಂದ ಬಸವ
ಆ ಬಸವನೇ ನಮ್ಮ ಜಾತಿಯವ
ಎನುತಿಹರು ಮಹಾಪುರುಷರು
ಬಸವ ಎಲ್ಲರವ ವಿಶ್ವಗುರು
ಜಗಡೊಡೆಯ ಎನ್ನಿ
ಹೌದೌದು
ಬಸವ ವಿಶ್ವಗುರು
ಆದರೆ ನಮ್ಮ ಜಾತಿಯವ
ಎನ್ನುವರ ನೋಡಿ
ನಕ್ಕೊಮ್ಮೆ ದಾರಿಬಿಡಿ


One thought on “

Leave a Reply

Back To Top