ಬಸವ ಜಯಂತಿ ವಿಶೇಷ

ಪ್ರಭಾ ಬೋರಗಾಂವಕರ

ಮೂಢ ಮತಿಗಳ ಸುತ್ತ…

ದೇವನೊಬ್ಬ ನಾಮಹಲವು
ಲಿಂಗ ಪೂಜೆ ಜಂಗಮ ಸೇವೆ
ಕಾಯಕವೇ ಕೈಲಾಸ ಎಂದರು ಬಸವಣ್ಣ

ಇದನರಿಯದ ಮೂಢಮತಿಗಳು
ಸಂದಿಗೊಂದಿಗೊಂದು ಗುಡಿಯ ಕಟ್ಟಿ
ಪೂಜೆ ಜಾತ್ರೆ ಹರಕೆ ಉತ್ಸವಕ್ಕೆಂದು
ಕುರಿ ಕೋಣ ಕೋಳಿ ಬಲಿಯಿತ್ತವರು

ಎಂಜಲೆಲೆಯ ಮೇಲೆ ಮಡೆಸ್ನಾನ
ತಲೆಯ ಮೇಲೆ ಪಾದ ಹೊತ್ತು
ಪುನೀತರಾದೆವೆಂಬ ಭಾವದಲ್ಲಿ
ಬೀಗುತಿರುವ ಅಧಮರು

ಮಾಟ ಮಂತ್ರ ತಂತ್ರ ವಶೀಕರಣ
ಜಾತಕ ಜೋತಿಷ್ಯಕೆ ಮಾರುಹೋಗಿ
ಕರಿದಾರ ಲಿಂಬೆ ಬೂದಿಗೆ ಬಲಿಯಾದವರು

ಹೋಮ ಹವನಕೆ ತುಪ್ಪ ಸುರಿದು
ನವಗ್ರಹ ನವಧಾನ್ಯ ಪೂಜೆಗೈದು
ಸಾಲಸೋಲ ಮಾಡಿ ಜೋಳಿಗೆ ತುಂಬಿದವರು

ವಾಸ್ತು -ಗ್ರಹ -ಜಾತಕ-ಕುಂಡಲಿ ದೋಷ
ಬಂಗಾರ ಗೋದಾನ ಭೂದಾನ ಮಾಡಿ
ಕೈ ಬರಿದಾಗಿ ತಲೆ ತಿರುಗಿ ಬೀದಿಗೆ ಬಿದ್ದವರು

ಸಮಾನತೆ ಸಾಮರಸ್ಯದ ಢೋಂಗಿ ಮಾತು
ಮಡಿ ಮೈಲಿಗೆಯೆಂದು ಒಳಗೊಳಗೇ ಹುಂಕಾರ
ಮಾನವೀಯತೆಯ ಮರೆತ ದುರುಳರು

ಬಹಿರಂಗದಿ ತೋರಲು ವಿಧೇಯ ವಿನಯತೆ
ಅಂತರಂಗದಲಿ ಮೋಸ ವಂಚನೆಯ ಕತ್ತಿ ಮಸೆತ
ಪ್ರೀತಿ ವಿಶ್ವಾಸಕೆ ದ್ರೋಹ ಬಗೆವ ದೂರ್ತರು

ಇಂಥ ಮೂಢ ಮತಿಗಳ ಸುತ್ತ
ಬದುಕು ಹೇಗೆ ಎಂಬ ಭಯವೇಕೆ
ಮೌಢ್ಯತೆ ಅಳಿಯಲಿ ವೈಚಾರಿಕತೆ ಬೆಳೆಯಲಿ
ನಮ್ಮ ಬದುಕು ಸಾರ್ಥಕತೆ ಮೆರೆಯಲಿ…..

———————————–


One thought on “

Leave a Reply

Back To Top