ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಬೆಹರ್ ಆಧಾರಿತ ಗಜಲ್

ಮೌಲ್ಯಗಳ ಪಾಲನೆಗೆ ಪ್ರೀತಿಯಲಿ ಸಂಚಲನ
ಮೌಢ್ಯಗಳ ಲಾಲಸೆಗೆ ಪ್ರೇಮದಲಿ ಸಂಚಲನ

ಜೀಕುವೆವು ಜೀವನವ ವಂಚಕರ ಸಂಚಿನಲಿ
ಆರ್ಭಟದ ಆಪ್ತತೆಗೆ ಬಂಧದಲಿ ಸಂಚಲನ

ಭವ್ಯತೆಯ ಚಾದರವ ಹಂಗಿರದೆ ಹೊದ್ದಿಹೆನು
ಕಾತರದಿ ಕಾದಿರುವ ಕಂಗಳಲಿ ಸಂಚಲನ

ಸ್ವಪ್ನಗಳ ಸಂಭ್ರಮವು ಚಿತ್ತವನು ಛೇಡಿಸಿದೆ
ಚೆಂಬೆಳಕ ಚೆಲ್ಲುತಿಹ ನಲ್ಮೆಯಲಿ ಸಂಚಲನ

ಸೋಲುಗಳ ಸಖ್ಯದಲಿ ಅರ್ಚನಳ ಆರುಮೆಯು
ಸಂಶಯದ ಸೌಷ್ಟವಕೆ ನೇಹದಲಿ ಸಂಚಲನ


About The Author

Leave a Reply

You cannot copy content of this page

Scroll to Top