ಈರಮ್ಮ.ಪಿ.ಕುಂದಗೋಳ.ಅಪ್ಪನಿಗಾಗಿ ಬರೆದ ಪತ್ರ ಅಮ್ಮ ಓದಿ ಉತ್ತರಿಸಿದಳು.

ಈರಮ್ಮ.ಪಿ.ಕುಂದಗೋಳ.

ಅಪ್ಪನಿಗಾಗಿ ಬರೆದ ಪತ್ರ ಅಮ್ಮ ಓದಿ ಉತ್ತರಿಸಿದಳು.

ಅಪ್ಪನಿಗಾಗಿ ಬರೆದ ಪತ್ರ ಅಮ್ಮನೇ ಓದಿ ಉತ್ತರಿಸಿದಳು.ಅದೇನೋ ಇದ್ದಕ್ಕಿಂತ ಕೆಟ್ಟ ಶಬ್ದ ಕಿವಿಗೆ ಬಂದು ಅಪ್ಪಳಿಸಿತು.ಅಪ್ಪ ನೀನಿಲ್ಲದ ಆ ಕ್ಷಣ ನಾ ಉಯಿಸಲಾರೆ ಕೆಟ್ಟ ದಿನಗಳು ಪ್ರಾರಂಭವಾಗುತ್ತಿದೆ.
ನೀನಿದ್ದರೆ ಧೈರ್ಯ ,ಉತ್ಸಾಹ ಅಮ್ಮನಿಗೂ ಅಸರ
ಅದೇಕೆ ಮರೆಯಾದೆ. ಕಾಣದ ಊರಿಗೆ ಪತ್ರ ಬರೆಯಬಾರದು ಎಂದು ವಿಳಾಸವಿಲ್ಲದ ಸ್ಥಳಕ್ಕೆ ಹೋಗಿರುವೆ ಮೌನದಿ ದರ್ಬಾರು ನಡೆಸಿದಂತೆ
ಮಾತುಗಳು ಮುಗಿದು ಹೋಗಿವೆ.

            ನವ ಚೈತನ್ಯ ತುಂಬಿ ಓದು,ಬರಹ,ಬದುಕಿನ ಪಾಠದ ಬಗ್ಗೆ ಕಲಿಸದೆ,ನೋವುಗಳನ್ನು ಹೇಗೆ ಸಹಿಸಬೇಕೆಂದು ಹೇಳದೆ,ಒಂದೊಂದು ಪ್ರಶ್ನೆಗೆ ಉತ್ತರಿಸದೆ ಮರುಕಳಿಸದೇ ಅಮ್ಮನಿಗೆ ಭಾರ ಹೊರೆಸಿ ನಿಟ್ಟುಸಿರು ಬಿಟ್ಟೂರುವೆಯಾ? ಅದು ಹೇಗೆ ತಾನೇ ಅಮ್ಮ ಸಹಿಸಿಕೊಳ್ಳಬೇಕು ಒಂಟಿ ಎತ್ತಿನ ಬಂಡಿ ಹೊಡೆದು ಸುಸ್ತು ಆಗಿ ವಯಸ್ಸಾಗಿದೆ.ಕನಸು ,ಆಸೆ,ಬಯಕೆ ಹಿಡೇರಿಸುವಲ್ಲಿ

ಮಗ್ನಳಾದಳು ಇಲ್ಲಿ.

             ಕಾರಣ ಕೊಡೋದೇ ಮಕ್ಕಳ ಬಾಳಿಗೆ ಶ್ರಯಸ್ಸು ತರದೆ ಮರೆಯಾದೆಯಾ? ನಿನ್ನಯ ಚಿಂತೆಯಲ್ಲಿ ಅಮ್ಮ ಮಕ್ಕಳಿಗಾಗಿ ಜೀವ ತೆವೆದು ದುಡಿದು ದಣಿದಿದ್ದಾಳೆ,ಮಕ್ಕಳಿಗೆ ಒಳ್ಳೆಯ ಭವಿಷ್ಯ ಬರೆದು ಸಮಾಜಕ್ಕೆ ಕೀರ್ತಿ ತರುವಂತೆ ಮಾಡಿದ್ದಾಳೆ.ಇದು ನೋಡಲು ನಿನಗೆ ಭಗವಂತ ಅವಕಾಶ ಕೊಡೋದೆ ಕರೆದುಕೊಂಡು ಹೋದೇನೆ? 

             ಎಲ್ಲಿದ್ದಿರು ನಿನ್ನ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಬಾಳೆ ಬದುಕಿ ತೋರಿಸಿದೆವು ಅಪ್ಪ,ಅಮ್ಮನ ನೆರಳು ಅಪ್ಪನಿಗಿಂತಲು ಮಿಗಿಲು ಎಂದು ತೋರಿಸಿ ಅಪ್ಪನ ಮೇಲಿನ ಪ್ರೀತಿಯನ್ನು ಕಡೆಗಣಿಸದೆ ಸತ್ಕರಿಸಿದ

ಗೌರವಿಸುವಂತೆ ಮಾಡಿದಳು ಅಮ್ಮ ಅಪ್ಪನಿಗಾಗಿ ಬರೆದ ಪತ್ರ ಅಮ್ಮನೇ ಓದಿ ಉತ್ತರಿದಳು ‘ಹೇ ಕಂದ ಚಿಂತಿಸದಿರು ವಿಧಿ ಆಟಕ್ಕೆ ಬಲಿಯಾರು ಅಪ್ಪ ಅಮ್ಮ ಎರಡು ಸ್ಥಾನ ತುಂಬಿಸುವ ಶಕ್ತಿ ಭಗವಂತ ನನಗೆ ಕೊಟ್ಟಿದ್ದಾನೆ ನಿನಗೆ ಸದಾ ನಾ ಸ್ಪೋರ್ತಿಯಾಗಿರುವೆ’.ಕಣ್ಣಂಚಿನ ಕಂಬನಿಯೊಳಗೆ ಅಪನ ಪ್ರೀತಿ ಕರಗಿತು.ಅವಳಿಗೊಂದು ನನ್ನ ಸಲಾಮ್.


One thought on “ಈರಮ್ಮ.ಪಿ.ಕುಂದಗೋಳ.ಅಪ್ಪನಿಗಾಗಿ ಬರೆದ ಪತ್ರ ಅಮ್ಮ ಓದಿ ಉತ್ತರಿಸಿದಳು.

Leave a Reply

Back To Top