ಇಂದಿರಾ ಮೋಟೆಬೆನ್ನೂರ ಕವಿತೆ-ಪಯಣ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಪಯಣ

ಮನಸು ಮಲ್ಲಿಗೆ
ಕನಸ ಸೊಲ್ಲಿಗೆ
ನಡೆದೇ ಎಲ್ಲಿಗೆ..? ಮೆಲ್ಲನೆ

ಭಾವ ಮಲ್ಲಿಗೆ
ಎದೆಯ ಗೆಲ್ಲಿಗೆ
ಮುಡಿಸಿ ಮೆಲ್ಲನೆ…? ಸುಮ್ಮನೆ

ಹೃದಯ ಗೂಡಲಿ
ಮಿಡಿದೆ ರಾಗವ…
ಇಣುಕಿ ನೋಟ..? ಬಿಮ್ಮನೆ

ಕವನ ಧವನ
ಪ್ರೀತಿ ಸಿರಿಯ
ಚೆಲುವ ಕಣ್ಮನ…ತಣ್ಣನೆ

ನಗುವ ನಯನ
ಮೌನ ಪಯಣ
ಹಕ್ಕಿ ಹೂ ಬನ…. ಕಮ್ಮನೆ

ನೆಲ ಮುಗಿಲಿನ
ಮಿಲನ ನಯನ
ಮಳೆಯ ಗಾಯನ ತೊಂ ತನನನ…..


About The Author


Comments

Leave a Reply

You cannot copy content of this page