ಮಕ್ಕಳಪದ್ಯಗಳು

ಅರುಣ ರಾವ್

ಆಟಿಕೆ

ಆಟಕೆ ಆಟಿಕೆ ಬಯಸಿತು ಮಗುವು
ಆಟಿಕೆ ಕಂಡರೆ ಮುಖದಲಿ ನಗುವು

ಆನೆ ಕುದುರೆ ಸ್ಪೈಡರ್ ಮ್ಯಾನು
ಒಂಟೆ ಸಿಂಹ ಬಲೂನು ಬ್ಯಾಂಡು
ಚೆಂದದ ಕಾರು ಗುಂಡನೆ ಚೆಂಡು

ಅಡುಗೆಯ ಪಾತ್ರೆಯ ಸೆಟ್ಟಿನ ಸಾಲು
ಪುಟಾಣಿ ಸೈಕಲ್ ವೇಗವು ಜೋರು
ಬ್ಯಾಟು ಬಾಲು ಬಾಣ ಬಿಲ್ಲು
ಜೊತೆಗೆ ಢಂ ಢಂ ಎನ್ನುವ ಗನ್ನು

ಡೋಲನು ಢಬಢಬ ಬಾರಿಸೊ ಕೋತಿ
ಎನಿತು ಚಂದವದು ಕುಣಿಯುವ ರೀತಿ
ಕೀಲು ಕೊಟ್ಟಾಗ ಕುಪ್ಪಳಿಸುವ ಪಕ್ಷಿ
ಎಲ್ಲವ ನೋಡುತ ಮಗುವು ಖುಷಿ


One thought on “

Leave a Reply

Back To Top