ನನ್ನೆದೆಯ ಗೂಡಲ್ಲಿ ಸುಧಾ ಪಾಟೀಲ್ ಕವಿತೆ-

ಕಾವ್ಯ ಸಂಗಾತಿ

ನನ್ನೆದೆಯ ಗೂಡಲ್ಲಿ

ಸುಧಾ ಪಾಟೀಲ್

ಲಗ್ಗೆ ಹಾಕಿವೆ ಎಲ್ಲ
ಕಲಸುಮೇಲೋಗರವಾಗಿ
ನೆನಪುಗಳು ಕನಸುಗಳು
ಕನವರಿಕೆಗಳು ಇಲ್ಲಸಲ್ಲದ
ವಿಚಾರಗಳು ಈ ಪುಟ್ಟ
ಗೂಡಲ್ಲಿ

ಹೊರಳಿ ಮರಳಿ ಸುರುಳಿ ಗಾಯವಾಗಿ ಚೀತ್ಕರಿಸುತಿರೆ
ಬೆಂಬಿಡದ ಬೇತಾಳದಂತೆ
ಹೆಗಲ ಮೇಲೆ ಸವಾರಿ ಮಾಡುತಿವೆ

ಭಾವನೆಗಳ ತರಂಗದಲ್ಲಿ
ವಿಜೃಂಭಿಸಿವೆ ಪ್ರೀತಿಯ
ಹೆಣಗಾಟಗಳು ಹೇರುಪೇರುಗಳು ಮನಸಿನ ತಲ್ಲಣಗಳು

ಹೃದಯದ ಪ್ರತಿ ಬಡಿತದಲ್ಲೂ
ನಲಿವಿದೆ ನೋವಿದೆ ಅಸಂಖ್ಯಾತ ಬಿಡಿಸಲಾರದ ಪ್ರಶ್ನೆಗಳಿವೆ

ನನ್ನೆದೆಯ ಗೂಡಲಿ ಸಂಭ್ರಮದ ಅಳುಕಿದೆ
ಗೆಲ್ಲುವ ಉಮೇದಿಯಿದೆ
ಗೆದ್ದು ಬಾಳುವ ಛಲವಿದೆ
ಹೊಂಗಿರಣ ಕಟ್ಟುವ ಶಕ್ತಿಯಿದೆ



ಸುಧಾ ಪಾಟೀಲ್

Leave a Reply

Back To Top