ಕಾವ್ಯ ಸಂಗಾತಿ
ಈರಮ್ಮ.ಪಿ..ಕುಂದಗೋಳ
ಆಳದ ನೋವು
ಹೆಣ್ಣಿನ ಮನಸ್ಸಲ್ಲಿ
ಯಾರಿಗೂ ಹೇಳದ
ಆಳದ ನೋವಿರುತ್ತೆ
ಯಾರು ಅರಿಯರು?
ಅವಳ ನೋವು!
ಅವಳಿಗೆ ಅವಳೇ ಸ್ಫೂರ್ತಿ
ಆ ಭಾದೆಗೆ ಹೊಡೆಯುವ
ಮನಸ್ಸು ತೀರದ ಮೌನದಿ
ಅರಿವಿನಿ ತಿಳಿ ಘಳಿಗೆ ಕ್ಷಣಿಕ!
ಮರೆಯುವಂತೆ ಮಾಡುವುದು ಅಷ್ಟೇ
ಅವಳಿಗಿದೆ ಅರಿವು ಯಾರು ಕೇಳರು?
ಕಣ್ಣೀರ ಹನಿಯೇ ಅವಳ ಸಂಗಾತಿಯೆಂದು
ಕಣ್ಣ ರೆಪ್ಪೆಯಲಿ ಜಾರಿದ ಆ ಕಂಬನಿ!
ಗಲ್ಲಕ್ಕೆ ಮುತ್ತಿಡುವ ಹಾಗೆ ಒತ್ತಿ
ಹೇಳುತಿದೆ ಹೇ ಸಖಿ ನಾನಿಲ್ಲವೇ
ಜೊತೆಗೆ ಕ್ಷಣಹೊತ್ತು ದುಃಖ
ಆವಿಯಾಗಿ ಬತ್ತಿಹೋಗುವುದು ಕಣ್ಣೀರು!
ಮಮೂಖದ ಛಾಯೆಯೊಳಗೆ
ನಗುವಿನ ಅಲೆ ಬಿರುವುದು
ತಾಳ್ಮೆಯ ಶೃತಿ ನುಡಿಸಬೇಕಿದೆ
ಜೀವಕ್ಕೆ ಭಾವ ಬೆಸೆಯುವಂತೆ
ಆ ನೋವು ಮರೆಯಾಗಲು…………..