ಕಾವ್ಯಸಂಗಾತಿ
ಮಾಜಾನ್ ಮಸ್ಕಿ
ಹೆಪ್ಪಾಗಲಿ ಭಾವ
ಹಾಳೆ ಮಸಿ ಲೇಖನಿ ಯಾಕೆ
ರಚಿಸುವೆ ಹೃದಯದಲ್ಲಿ
ಬರೆಯುವೆ ಹನಿ ಹನಿಗಳಲ್ಲಿ
ಭಾವ ತುಂಬಿದ ಕವಿತೆ
ಮಾಣಿಕ್ಯಧಾರತಿ ಬೆಳಗುತ್ತಿರಲು
ಉಷೆಯ ಮುಕುಟದ ಮೇಲೆ
ಭಾವನೆಗಳ ಜೊತೆ ಪಯಣ
ವಿಕಸಿತ ಮನೋಮಯ ಸೌಂದರ್ಯ
ಉಕ್ಕುವ ತೊರೆ ತಡೆಯುವರೆ
ಕಾದ ಭುವಿಗೆ ಒಂದು ಹನಿ ಆವಿ
ಪ್ರಕೃತಿಯ ಪಾಠವೇ ನಮ್ಮೊಳು
ಕಂಪನ ನೆಲದಲ್ಲಿ ನೆಲೆ ಉಂಟೇ
ಮಿತ ಮಾತು ಭಾವ ಹಿತ
ತೊರೆದು ಕೂಡುವ ಗದ್ದಲ
ಬಯಕೆ ಭಾವ ಬೆಸುಗೆ ಕಳಚಿ
ಹೆಪ್ಪಾಗಲಿ ಹೃದಯ ಭಾವ
ಮಾಜಾನ್ ಮಸ್ಕಿ