ಕಾವ್ಯ ಸಂಗಾತಿ
ನಳಿನ ಡಿ ಚಿಕ್ಕಮಗಳೂರು
ಪ್ರಿಯನ ಸಾನಿದ್ಯ
ಹೊಂಗನಸಿನ ಅಂಗಳದಿ,
ಬಿರಿದ ಮಲ್ಲಿಗೆಯ ಪರಿಮಳವು
ಬಾ ಎಂದು ಕೈಬೀಸಿ ಕರೆಯುತ್ತಿದೆ..
ಕೆಂದಾವರೆಯ ಕಂಗಳಲಿ,
ಘನಶ್ಯಾಮನ ಮೋಡಿಯಲಿ
ಮುರಳಿ ನಾದವು ಹೊಮ್ಮಿ
ಎನ್ನ ವಕ್ಷೋಜಗಳಲಿ ನಲಿದು
ಆನಂದದುಂಬಲು ಒಲಿದು
ಚುಂಬಕ ಗಾಳಿಯ ಆಹ್ವಾನ,
ಸುಗಂಧ ಪುಷ್ಪಗಳು ಸಮ್ಮಿಲನಕೆ
ಘಮ್ಮೆಂದು ತೂಗುತಿವೆ
ವನರಾಶಿಯಲ್ಲಿ..
ಒಲವು ಮೂಡದಿರೆ
ನಾವು ಅನಾಮಿಕರು
ಲೋಕದಲಿ..
ಈ ಒಲವಿಗೆ ಉಸಿರಾದಿರೇಕೆ?
ಹೀಗೆಯೇ ಹೇಗೋ ಇದ್ದ
ಮನಸಿಗೆ ಜೊತೆಯಾದಿರಿ ಏಕೆ?
ಒಂಟಿ ದಾರಿಯಲಿ ಹೂದಂಡೆ ಸಿಕ್ಕಂತೆ,
ಮುಡಿತುಂಬಾ ತುಂಬಿಕೊಂಡು,
ಮನಸು ತುಂಬಿ ಹೋದಿರಿ..
ಯಾವ ಸೀಮೆಯ ಪ್ರೇಮ ಇದೆಲ್ಲಾ?
ನಳಿನ ಡಿ ಚಿಕ್ಕಮಗಳೂರು
ಕೊನೆಯ ಸಾಲು ಅರ್ಥ ಗರ್ಭಿತವಾಗಿದೆ.
Congrats Mme!