ಕಾವ್ಯ ಸಂಗಾತಿ
ಶ್ರೀಕಾಂತಯ್ಯ ಮಠ
ಹಾಯ್ಕುಗಳು
೧
ಸುಖವೆಂದರೆ
ಹಣ ಆಸ್ತಿ ಅಂತಸ್ತು
ಇದುವೆ ಭೃಮೆ.
೨
ನೋವೇಕೆ ಹೀಗೆ
ನಿನ್ನೊಳು ಬಂಧಿಯಾದೆ
ಅಪರಾಧವೆ..?
೩
ಸಾವಿನ ಸೌಧ
ನೆಲದ ಅಲಂಕಾರ
ಶವ ಸತ್ಕಾರ.
೪
ಅವಳ ರೂಪ
ಮನಸ್ಸು ಪರಿಣಾಮ
ಚಂದ್ರ ಸಾಟಿಯೆ.
೫
ಮನುಷ್ಯ ಒಂದೆ
ಹೆಸರು ರೂಪ ಜಾತಿ
ದ್ವಿಮುಖ ದೇಹ.
೬
ಸೂರ್ಯ ಬಂದನು
ಕರ್ತವ್ಯಕ್ಕೆ ಹಾಜರು
ಎಚ್ಚರಿಸಿದ.
೭
ನೆಮ್ಮದಿ ಬೇಕು
ಬದುಕುವ ವಿಜ್ಞಾನ
ಕೈಗೆ ಜಗತ್ತು.
೮
ಕಾಣುವ ದೇಹ
ಒಳೊಳಗೆ ಸಂದೇಹ
ಮತ್ಸರ ಗುಣ.
೯
ನನ್ನ ಬಿಟ್ಟಳು
ಕೊನೆ ಘಳಿಗೆ ಕಾಲ
ಹೃದಯ ಹೀನ.
೧೦
ಹೃದಯ ಪ್ರೀತಿ
ಮನವರಿಕೆಯಿಲ್ಲ
ಕಾಣಿಕೆ ಏಕೆ..?