ಪ್ರೊ.ಸಿದ್ದು ಸಾವಳಸಂಗರವರ-ಹನಿಗವನಗಳು

ಕಾವ್ಯ ಸಂಗಾತಿ

ಪ್ರೊ.ಸಿದ್ದು ಸಾವಳಸಂಗ

ಹನಿಗವನಗಳು

Fresh grass at beautiful spring

ಬಾಲ್ಯದಲ್ಲಿ
ಮಾಡಿದ ತಪ್ಪು !
ಮುಪ್ಪಿನಲ್ಲಿ
ಸರಿಪಡಿಸಿದರೆ ಆಗುವುದೇ
ಒಪ್ಪು !!

ಮುತ್ತು ರತ್ನ ಹೆಕ್ಕಲು
ಸಾಗರದಾಳಕ್ಕೆ ಇಳಿ !
ಜ್ಞಾನದ ಗಣಿಯಾಗಲು
ಸದಾ ಇರಲಿ
ಪುಸ್ತಕ ನಿನ್ನ ಬಳಿ !!

ಪ್ರೀತಿ
ಅಮರ !
ಪ್ರೀತಿಸಿದವರು
ಸುತ್ತಲೇಬೇಕು
ಗಿಡ ಮರ !!

B

ಶ್ರಮವಹಿಸಿಅ
ದುಡಿ !
ಕಟ್ಟಿಕೋ ನಿನ್ನದೇ
ಗುಡಿ !!

ಹದಿನಾರಕ್ಕೆ
ಹರೆಯು !
ಅರವತ್ತಕ್ಕೆ
ಮರೆವು !!


Leave a Reply

Back To Top