ಉದಯ್ ಕೋಟ-ಚುನಾವಣಾ ಹಾಡು

ಕಾವ್ಯ ಸಂಗಾತಿ

ಉದಯ್ ಕೋಟ

ಚುನಾವಣಾ ಹಾಡು

ಬಂದಿತ್ತಣ್ಣ ಚುನಾವಣೆ ಬಂದಿತ್ತಣ್ಣ
ಶಾಂತಿಯುತ ಮತದಾನ ಮಾಡಿರಣ್ಣ
ಪ್ರಜಾಪ್ರಭುತ್ವದ ಹಬ್ಬ ಇದು ಪ್ರಜೆಗಳ ಹಕ್ಕಿನ ಹಬ್ಬ
ನ್ಯಾಯ ಸಮ್ಮತ ನಡಿಗೆ ನಮ್ಮ ಜನಗಳ ತೀರ್ಪಿನ ಕಡೆಗೆ || ಬಂದಿತ್ತಣ್ಣ||

ಜಾಗೃತ ಮತದಾರ ನೀನಾಗಬೇಕು ಈಗ
ಓಟಿನ ಪುರಾವೆ ನಿನಗಿಲ್ಲಿ ಸಿಗುವುದೀಗ
ಬೆದರಿಕೆ ಆಮಿಷಕ್ಕೆ ಬಲಿಯಾಗದಿರು ನೀನು
ಓಟಿನ ಮಾರಾಟ ಮಾಡಲೇ ಬೇಡ ನೀನು
ಚುನಾವಣೆ ಆಯೋಗವು ಹದ್ದಿನ ಕಣ್ಣು ಇಟ್ಟು
ನೋಡುತ್ತಾ ಇರುವುದು
ಭ್ರಷ್ಟಾಚಾರಕ್ಕೆ ಮುಕ್ತಿ ನೀಡುವುದು||ಬಂದಿತ್ತಣ್ಣಾ||

ನೀತಿ ಸಂಹಿತೆಯ ಪಾಲನೆ ಮಾಡಿರೆಲ್ಲಾ
ಆಯೋಗದಾಶಯವ ಈಡೇರಿಸ ಬನ್ನಿರೆಲ್ಲಾ
ಒಂದೊಂದು ವೋಟು ಕೂಡ ಅಮೂಲ್ಯ ಸಂಪತ್ತು
ಹೊಸ ಮತದಾರರೀಗ ದೇಶಕ್ಕೆ ತಾಕತ್ತು
ವೋಟರ್ ಹೆಲ್ಪ್ ಲೈನ್, ವಿವಿಪ್ಯಾಟ್, ಇವಿಎಂ ಎಲ್ಲವೂ ಉಂಟಣ್ಣ
ನೀ ವೋಟಿಗೆ ಬಾರಣ್ಣ||ಬಂದಿತ್ತಣ್ಣಾ||

ಸಾಂವಿಧಾನಿಕ ಕರ್ತವ್ಯ ಎಂದು ತಿಳಿದು
ಒಳ್ಳೆಯ ನಾಡನ್ನು ಕಟ್ಟಲು ಮತ ಹಾಕು
ಓಟಿನ ದಿನ ಇದೆ ಸಂಬಳ ಸಹಿತ ರಜೆ
ಅಶಕ್ತರಿಗೂ ಕೂಡ ಎಲ್ಲೆಲ್ಲೂ ಆಸರೆ ಇದೆ
ಮುಂದಿನ ನಮ್ಮ ನಡಿಗೆ ಓಟಿನ ಬೂತಿನೆಡೆಗೆ
ಬನ್ನಿರಿ ..ಬನ್ನಿರಿ …ಎಲ್ಲರೂ ಮತ ಹಾಕಿರಿ ||ಬಂದಿತ್ತಣ್ಣಾ||


Leave a Reply

Back To Top