ಅಂಬೇಡ್ಕರ್ ಜಯಂತಿ ವಿಶೇಷ

ಬಾಬಾ ಸಾಹೇಬ್ರಿಗೊಂದು ಪತ್ರ.

ಲಲಿತಾ ಪ್ರಭು ಅಂಗಡಿ

ಸಂವಿಧಾನ ಶಿಲ್ಪಿಗೆ ಶರಣು
ಹೇಗಿದ್ದೀರಿ ಅಲ್ಲಿ
ಇಲ್ಲಿ ನಾವಂತು ನಿಮ್ಮ ಪ್ರತಿಮೆಯನ್ನು
ಕಂಚು ಹಿತ್ತಾಳೆ ತಾಮ್ರ ಮುಂತಾದ ಲೋಹಗಳಿಂದ ಸ್ಥಾಪಿಸಿ ಎತ್ತರೆತ್ತರ ಬಾನಿಗೆ
ಮುಟ್ಟುವಂತೆ ಸ್ಫರ್ಧೆಗೆ ನಿಲ್ಲಿಸಿ
ಪುಸ್ತಕ ಕೈಯಲ್ಲಿಟ್ಟು ಪೂಜೆ ಮಾಡುತ್ತೇವೆ
ಬೇಕಾದರೆ ನೀವು ನೋಡಿ ಆಕಾಶದಿಂದ
ಸಮೀಪ ನಿಮಗೆ
ಇಹಲೋಕದಲ್ಲಿ ನಿಮ್ಮ ತತ್ವಕ್ಕೆ
ಮಸಿ ಬಳಿದು ದಿನನಿತ್ಯವೂ ಚೀರಾಟ
ಹೋರಾಟ ಹೊಟ್ಟೆ ತುಂಬಿಸಿಕೊಳ್ಳುವ ವರಿಗೆ
ಹಸಿದವರು ದುಡಿದವರು ತೆಪ್ಪಗೆ ನಿಮ್ಮನು
ಮನದಲಿ ನೆನೆಸುತ್ತ ಕಣ್ಣೀರ ಹಾಕುವರು
ಮತ್ತೆ ಕವಿಗಳಂತು ಕೈಲಾಗದೆ ಮೈಪರಚಿಕೊಂಡ ಎನ್ನುವಂತೆ ಶಬ್ದಗಳಲ್ಲಿ ನಿಮನು ಕೊಂಡಾಡಿ ಪುಂಡಾಡಿಗಳಿಗೆ ಪೆನ್ನಿಂದ ಚುಚ್ಚುವರು
ಅವರಿಗೆ ಅದು ಅವರಿಗೆ ಸ್ಪರ್ಶವಾಗಲ್ಲ
ಇರಲಿಬಿಡಿ ನೀವೇನು ಮಾಡುತ್ತಿರಿ
ಅಲ್ಲಿಯ ಸಭೆಯಲ್ಲಿ ಬುದ್ಧ ಬಸವರೊಡಗೂಡಿ ಚರ್ಚೆ ಮಾಡ್ತಾ ಇದ್ದೀರಾ
ಮತ್ತೊಮ್ಮೆ ಭೂಲೋಕಕ್ಕೆ ಹೋಗಿ ತಿದ್ದುವುದು ಅಂತೀರಾ
ಅಥವಾ ಒಂದ್ಸಲ ಹೋಗಿದ್ದೆ ತಪ್ಪಾಗಿದೆ ಅಂತೀರಾ
ಹಕ್ಕುಗಳ ಕೊಟ್ಟು ನೀವು ನಿಮಗೆ ಹಕ್ಕಿದೆಯಲ್ಲವೆ ಬಂದೊಮ್ಮೆ ತಿದ್ದಿ ತೀಡಿ
ಬರುವಿರಾ ಬರುತ್ತಾರೆಂದು ಭಾವಿಸಿರುವೆ
ಗೊತ್ತು ನಿಮ್ಮ ಮನನೊಂದಿದೆ ಎಂದು
ಗೋಮುಖ ವ್ಯಾಘ್ರ ಗಳು ಮಾಡಿದ ಮೋಸಕೆ
ಆದ್ರೂ ಸಾಮಾನ್ಯ ಜನರ ಸಂತೋಷಕ್ಕಾಗಿ
ಅವರ ಬದುಕಿನ ಬವಣೆಯ ಬಾಗಿಲಿಗೆ ಭಾಗ್ಯದಾತರಾಗಿ ಬನ್ನಿ ಎಂದು ಹಂಬಲಿಸುವೆ ಇದರ ಮೇಲೆ ನಿಮ್ಮ ಇಷ್ಟ
ಅಲ್ಲಿ ಬುದ್ದ ಬಸವ ಗಾಂಧಿ ಮತ್ತಿತರನು‌ ಬೆಟ್ಟಿ ಆಗಿರಬಹುದು ಅಲ್ಲವೆ
ಬಾಕಿ ಎಲ್ಲಾ ಕ್ಷೇಮವಲ್ಲವೆ
ಇಂತಿ ಶರಣು ಶರಣಾರ್ಥಿ.


2 thoughts on “

Leave a Reply

Back To Top