ಅಂಬೇಡ್ಕರ್ ಜಯಂತಿ ವಿಶೇಷ

ರೋಹಿಣಿ ಯಾದವಾಡ

ಗಜಲ್

ಅಳಿಸಲಾಗದ ಕಾನೂನು ರಚಿಸಿ ನ್ಯಾಯಪರನಾದೆ ನೀ ಅಂಬೇಡ್ಕರ
ಧಮನಿತರ ಶೋಷಣೆಗೆ ಸಿಡಿದು ಬಾಸ್ಕರನಾದೆ ನೀ ಅಂಬೇಡ್ಕರ

ಶತ ಶತಮಾನದಲೂ ನಡೆಯುತಿದೆ ದಲಿತರ ಮೇಲೆ ಶೋಷಣೆ
ಅಕ್ಷರವೇ ಶೋಷಣೆ ಅಳಿಸಲು ಸಮನಾದ ಅಸ್ತ್ರವೆಂದೆ ನೀ ಅಂಬೇಡ್ಕರ

ಸಂಪ್ರದಾಯದ ಸಂಕೋಲೆಯಲಿ ಬಂಧಿಸುವ ಹುನ್ನಾರು ಇಲ್ಲಿಯದು
ಗೊಡ್ಡು ಸಂಪ್ರದಾಯಗಳ ತಿಲಾಂಜಲಿಗೆ ಅರಿವು ಮೂಡಿಸಿದೆ ನೀ ಅಂಬೇಡ್ಕರ

ಮೂಲಭೂತವಾದಿಗಳ ಅಟ್ಟಹಾಸಕೆ ಕೊನೆಯಿಲ್ಲದ ಪಯಣ ಸಾಗಿತ್ತು ಇಲ್ಲಿ
ಕಾನೂನು ಪಾಂಡಿತ್ಯಗಳಿಸಿ ಕೆಳಸ್ತರಕ್ಕೆ ಧ್ವನಿಯಾದೆ ನೀ ಅಂಬೇಡ್ಕರ

ಎಲ್ಲದಕ್ಕೂ ಮನಸ್ಸೆ ಮೂಲ ಎಂಬುದು ಅಳಿಸಲಾಗದ ಸತ್ಯವೆಂಬುದು ತಿಳಿ
ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿ ಎಂದೆ ನೀ ಅಂಬೇಡ್ಕರ

ನೊಂದವರ ನೋವು ನೋಯದವರೆತ್ತ ಬಲ್ಲರು ಎಂಬುದು ದಿಟ
ಅವಮಾನದಿ ನೊಂದು ನೊಂದವರ ಬಾಳಿಗೆ ದಾರಿ ತೋರಿದೆ ನೀ ಅಂಬೇಡ್ಕರ

ಬುದ್ಧನ ಶಾಂತಿ ಬಸವಣ ಕ್ರಾಂತಿಯ ಮುಂದುವರಿಕೆ ನೀನೆಂದಳಾ ರೋಹಿ
ಅಕ್ಷರದಲ್ಲಿ ಸಂವಿಧಾನ ರಚಿಸಿ ಸಮತೆಯ ಶಿಲ್ಪಿಯಾದೆ ನೀ ಅಂಬೇಡ್ಕರ.


Leave a Reply

Back To Top