ಇಂದಿರಾ ಮೋಟೆಬೆನ್ನೂರರವರ ಕವಿತೆ-ಸ್ನೇಹದೊಸಗೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹದೊಸಗೆ

ಹೇಗೆ ಬಿಡಲಿ
ಜೀವ ಭಾವದ
ನೋವ ಹೂವಿನ
ಸ್ನೇಹ ಸಿಂಚನ

ಪ್ರೀತಿ ಪರಿಮಳ
ಹೃದಯಕಲರವ
ನಿತ್ಯ ಸತ್ಯದ
ಚೆಲುವ ದರ್ಶನ

ನೋವ ನೀಡಿ
ನಗೆಯ ಕಸಿದು
ಭಾವ ಬಸಿದು
ಕಾಡಬೇಡ ಜೀವವೇ…

ನನ್ನ ನೋವು
ನೀನು ಅರಿಯೆ
ಮುನಿದು ನಿಂತೆ ದೂರಕೆ
ಮನ್ನಿಸೊಮ್ಮೆ ಮೌನವೇ…

ನಿನ್ನ ಭಾವದ
ನೆಲದ ಮೇಲೆ
ನನ್ನ ಜೀವದ
ಪಯಣವು

ಎಲ್ಲ ಅರಿತು
ಮತ್ತೆ ಕಾಡುತ
ನೋವ ಕೊಡುವೆ
ಸಲ್ಲದಿದು ಸ್ನೇಹಕೆ


Leave a Reply

Back To Top