ಪಿ. ನಂದಕುಮಾರ್ ಕವಿತೆ-ಉರಿ ಬಿಸಿಲ ಮರಳ ಕಣ

ಕಾವ್ಯ ಸಂಗಾತಿ

ಪಿ. ನಂದಕುಮಾರ್

ಉರಿ ಬಿಸಿಲ ಮರಳ ಕಣ

ಹಾದಿ ಬದಿಗೊಂದು
ಮೌನ ಮಲಗಿದೆ
ನಿನ್ನ ನೆನಪ ರುಮಾಲೆಯನ್ನು
ಹೊದ್ದು ನಗುತ್ತಿದೆ

ಇಂದೇಕೋ ಕಾಡುವ ಗಳಿಗೆಗಳೆಲ್ಲಾ ಮಾಯವಾಗಿದೆ ನನ್ನಲ್ಲಿ
ಉರಿ ಬಿಸಿಲ ಮರಳ ಕಣ
ನೀನು ಚೆಲ್ಲಿ ಹೋಗಿದೆ ಇಲ್ಲಿ

ದಾರಿ ಇಕ್ಕೆಲ ಹೇಳಿದೆ
ನಿನ್ನನ್ನು ರುಜು ಮಾಡಿ
“ಇನ್ನೂ ಬರಲಾರೆಯಾ?” ಎಂದು “ಈಗ ಹೊರಟೆ, ಬಿಸಿಲ ನೆತ್ತಿಗೆ ನೆರಳ ಹಸೆ ಬರೆದು ಬರುವೆನು” ಎಂದ

“ಪ್ರೀತಿ ಸೀಮೆಯ ದಾಖಲಾತಿಗಳು ನೆನಪಿನಷ್ಟು ಮದುರವಲ್ಲ” ಎಂದೆ,
ಅದಕ್ಕೆ ಅವನ ಉತ್ತರ -ನಾನು ಇಷ್ಟೆಲ್ಲ ಹೇಳುವಾಗ ಅವನು ಸತ್ತು ತಿಂಗಳಾಗಿತ್ತು.

————————————

-ಪಿ. ನಂದಕುಮಾರ್

2 thoughts on “ಪಿ. ನಂದಕುಮಾರ್ ಕವಿತೆ-ಉರಿ ಬಿಸಿಲ ಮರಳ ಕಣ

Leave a Reply

Back To Top