ಕಾವ್ಯ ಸಂಗಾತಿ
ಸಂತೋಷ ಅಂಗಡಿ
ಮಾತು ಬಿಟ್ಟ ದಿನ
ಉರಿ ಬಿಸಿಲು
ಉರಿದುರಿದು ಬೀಳುತಿತ್ತು
ಹೊಳೆ ಮಾತ್ರ ತಣ್ಣಗೆ ಹರಿಯುತ್ತಿತ್ತು
ತೀರದಲಿ ತಂಗಾಳಿ
ಕಾದ ಉಸುಕಿನ ಕಣವ ಸವರಿ
ಎದೆಗಪ್ಪುತ್ತಿತ್ತು
ನೀನು ಮಾತು ಬಿಟ್ಟ ದಿನ
ಎಲ್ಲವೂ ಇದ್ದಹಾಗೆ ಇದ್ದವು
ನಶೆದುಂಬಿದ ಕಂಗಳ ಕೆಂಪು
ಮರೆತುಹೋದ ಮನೆಯ ರಸ್ತೆ
ಅಪರಿಚಿತ ಜಗತ್ತು
ಹೃದಯ ಊನಾದ ಮನುಷ್ಯರು
ಇನ್ನಾವುದೋ ವಿಚಿತ್ರ ಲೋಕವೊಂದರ ಜೊತೆ ನಾನಿರುವಂತೆ
ಜಗಜಿತ್ ಸಿಂಗ್ ನ ಗಜಲುಗಳು
ನಾನೇ ಬರೆದವು ಅನಿಸತೊಡಗಿದವು
ಊರೆಲ್ಲವೂ ನಿಶ್ಚಲವಾಗಿ
ಪೋಟೋದೊಳಗೆ ಅಡಗಿ ಕುಳಿತಿತ್ತು
ನೀನು ಮಾತು ಬಿಟ್ಟ ದಿನ
ನೀ ಕೊಟ್ಟ ಮಾತು ನೆನಪಾಯಿತು.
ಕವಿತೆಯೊಳಗಿನ ಭಾವ ನವಿರಾಗಿ ಕೈ ಸವರಿ, ಮೆಲ್ಲಗೆ ಮೈಗೆ ಆವರಿಸಿಕೊಳ್ಳುವ ಆಪ್ತತೆಯನ್ನು ಹೊಂದಿದೆ
ಧನ್ಯವಾದಗಳು ರವಿ ದೇವರಡ್ಡಿ ಸರ್
ಮನ ಮುಟ್ಟುವಂತಹ ನುಡಿಗಳು
ಪದಗಳು ಮಾತಾಡಿ ಅರ್ಥ ಹೇಳುವಂತಿದೆ.
ಧನ್ಯವಾದಗಳು
ಮಾಮಾರ ಸುಪರ
ಧನ್ಯವಾದಗಳು ರಸೂಲ್