ಕಾವ್ಯ ಸಂಗಾತಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕನಸುಗಳು
ಕನಸುಗಳು
ತಲೆ ಎತ್ತಿ ನಿಲ್ಲುತ್ತವೆ
ಸಮಯ
ಸಂದರ್ಭಗಳ
ಹಂಗಿಲ್ಲದೆ
ಬೇಡದ ಸಂತಾನದಂತೆ
ಹಾಗೆಯೆ ದಿಢೀರಂತ
ಪಶ್ಚಿಮದಲಿ
ಇಂಗಿಹೋಗುತ್ತವೆ
ಅಕಾಲ ಮೃತ್ಯುವಿಗೆ
ತುತ್ತಾದ
ಹಸಿವಿನ
ಸಾಂಕ್ರಾಮಿಕ ಅಡರಿದ
ಒಂದೊಮ್ಮೆಯ
ಸೋಮಾಲಿಯಾ
ಹಸುಳೆಗಳಂತೆ…!
ಕೆಲ ಕನಸುಗಳು
ದಷ್ಟಪುಷ್ಟ ಮೈತುಂಬಿ
ನಿರಾಳ ಹೆಜ್ಜೆಯ
ಕಲಿಗಳು!
ಅಂಥ ಕನಸು ಕಲಿಗಳೆ
ಜಗದುಗಮದಿಂದ
ಇಂದಿಗೂ ಎಂದೆಂದಿಗೂ
ಆವಿಷ್ಕಾರಗಳ
ನಿರಂತರ
ಬಸಿರಿನುದರ!
ಕನಸುಗಳು
ಒಂದೇ ಒಂದು ಕೋಶ ಕಂಡ
ಭವಿಷ್ಯದ
ಬೃಹದಾಕಾರಗಳ
ಸಾಕಾರ!
ಒಂದೊಮ್ಮಯ ಆದಿಮಾನವನ
ವಿಕಸನ
ಅಂಥ ಕಲಿ ಕನಸುಗಳು!
————————
“ಒಂದೊಮ್ಮೆಯ ಆದಿ ಮಾವವನ ವಿಕಸನ”
“ಸೋಮಾಲಿಯದ ಕನಸುಗಳು ಬೇಡದ ಸಂತಾನದಂತೆ ಕಾಡುತ್ತವೆ”
Needless to formally say that I loved it. Congrats Murthy