ಪ್ರಮೀಳಾ ರಾಜ್ ಕವಿತೆ-ಭಾವಯಾನಿಯ ಹಾಡು.

pramila bavayani

ಕಾವ್ಯ ಸಂಗಾತಿ

ಪ್ರಮೀಳಾ ರಾಜ್

ಭಾವಯಾನಿ

ನನ್ನತನ ಸ್ವಾಭಿಮಾನ ಯಾವುದೂ
ಹೆಚ್ಚು ಅನಿಸಲಿಲ್ಲ ನನಗೆ
ಬಾಗಿದ್ದು ಸೋತಿದ್ದು ಎಲ್ಲವೂ ಒಲವಿಗಾಗಿ
ಭಾವನೆಗಳಿಗೆ ಕೊಡಲಿಯೇಟು ಬಿದ್ದಾಗಲೂ
ಅಳಬೇಕು ಅನಿಸಲಿಲ್ಲ
ಎಲ್ಲಿ ನಿಮ್ಮನ್ನು ದ್ವೇಷಿಸಿಬಿಡುವೇನೋ ಎಂಬ
ಭಯ ನನಗೆ!!

ಸ್ವಾಭಿಮಾನ….. ಹುಟ್ಟು ಆಸ್ತಿ,,
ಆದರೂ ಬದಿಗಿಟ್ಟುಬಿಡುತ್ತೇನೆ ನನ್ನವರಿಗಾಗಿ
ನಾನು ಪ್ರೀತಿಸುವವರಿಗಾಗಿ…
ಆದರೆ…
ಸ್ನೇಹಕ್ಕಿಂತ ಸ್ವಾಭಿಮಾನವೇ ನಿಮಗೆ ಹೆಚ್ಚು ಅನಿಸುವುದಾದರೆ
ದೂರವೇ ನಿಂತು ಬಿಡುತ್ತೇನೆ
ನಡುವೆ ಒಂದಿಷ್ಟು ಅಂತರವಿಟ್ಟು…!

ಭಾವನೆಗಳು…. ಅಮೂಲ್ಯ
ಒಲವು ಕಾಳಜಿ ಭಾವಯಾನಿಯ ಗುಣ…
ಬಯಸಿದ್ದು ಹಿಡಿ ಪ್ರೀತಿಯಷ್ಟೇ…
ನನ್ನತನವೆಂಬುದು ಒಲವಿಗೆ
ಬೇಲಿ ಹಾಕುವುದಾದರೆ ಮರೆತುಬಿಡಿ…
ಸ್ವಾಭಿಮಾನ ಉಸಿರುಗಟ್ಟಿ ಸಾಯುತ್ತದೆ!!

ಬದುಕು ಪ್ರೀತಿಯ ಹಾಡು…
ದಿನನಿತ್ಯ ಹಾಡಬೇಕು…
ನನ್ನವರಿಗಾಗಿ… ನನ್ನ ಪ್ರೀತಿಸುವವರಿಗಾಗಿ..
ನೆಪ ಮಾತ್ರದ ಒಲವು ನಿಮ್ಮದಾದರೆ
ಮೌನವಾಗಿದ್ದು ಬಿಡಿ…
ನನ್ನೊಳಗೆ ದ್ವೇಷದ ಕಿಡಿ ಹಚ್ಚಬೇಡಿ!!


One thought on “ಪ್ರಮೀಳಾ ರಾಜ್ ಕವಿತೆ-ಭಾವಯಾನಿಯ ಹಾಡು.

Leave a Reply

Back To Top