ಮಕ್ಕಳ ಕವಿತೆ

ಅರುಣಾ ರಾವ್

ಸಿಪಾಯಿ

ಸಿಪಾಯಿ ಮಾವ ಸಿಪಾಯಿ ಮಾವ
ನೀ ನಿಂತಿರುವೆ ಗಡಿಯಲ್ಲಿ
ಹಗಲಿರುಲೆನ್ನದೆ ಚಳಿ ಮಳೆ ಎನ್ನದೆ
ಕಾಯಕ ಗೈಯುವೆ ಹರುಷದಲಿ

ಗರಿಗರಿ ಉಡುಪು ತಲೆಗೆ ಹೆಲ್ಮೇಟು
ಥಳಥಳಿಸುವ ಕೋವಿ ಕೈಯಲ್ಲಿ
ಮಿರಿಮಿರಿ ಮಿನುಗವ ಷೂಸನು ಧರಸಿ
ನೀ ನಿಂತಿರುವೆ ಠೀವಿಯಲಿ

ವೈರಿಯ ಹೃದಯದಿ ನಡುಕವು ಕೇಳು
ನಿನ್ನನು ಒಮ್ಮೆ ನೋಡುತಲಿ
ಆರಡಿ ಉದ್ದದ ಸಿಪಾಯಿ ನಿನಗೆ
ನೀನೇ ಸಾಟಿ ನಿಜದಲ್ಲಿ

ತ್ರಿವರ್ಣ ಧ್ವಜವನು ಕಂಡ ಕೂಡಲೆ
ಸೆಲ್ಯೂಟು ಹೊಡೆವೆ ಹೆಮ್ಮೆಯಲಿ
ಭಾರತ ದೇಶದ ಪ್ರೇಮವೆ ತುಂಬಿದೆ
ನಿನ್ನಯ ಧಮನಿ ಧಮನಿಯಲಿ

ನಿನ್ನ ಹಾಗೆ ಬಲಶಾಲಿ ಪೈಲ್ಚಾನ್
ಆಗುವ ನನ್ನಯ ಯತ್ನದಲಿ
ಅಮ್ಮನು ನೀಡಿದ ಊಟವೆಲ್ಲವ
ತಿಂದೇ ಬಿಡುವೆ ನಿಮಿಷದಲಿ

ನಾನೂ ಕೂಡ ನಿನ್ನಯ ಹಾಗೆ
ಮಿಲಿಟರಿ ಸೇರುವೆ ಭವಿಷ್ಯದಲಿ
ನೀನೇ ಮಾದರಿ ನೀ ಆದರ್ಶವು
ನನಗೆ ಎಂದಿಗೂ ನೆನಪಿರಲಿ


Leave a Reply

Back To Top