ಕಾವ್ಯ ಸಂಗಾತಿ
ಪ್ರೊ ದೀಪಾ ಜಿಗಬಡ್ಡೆ
ಗುರು ಬಸವ ನಾಮ
ಜಗದ ಮಣೆಯ ಮೇಲೊಂದು
ಪಟ್ಟಣವ ಕಂಡೆ
ಪಟ್ಟಣದಲ್ಲೊಂದು ಪಟ್ಟಣದ
ಮಹಾ ಮನೆ ಇತ್ತು ನೋಡಾ
ಅಲ್ಲಿ ರವಿ ಶಶಿಯ
ಹೊಂಗಿರಣವೇ ತುಂಬಿ ತುಳುಕಿತ್ತು ಕಾಣಾ
ಎತ್ತ ನೋಡಿದಡತ್ತ
ಗುರು ಬಸವನಾಮ
ಬಸವಣ್ಣನ ಆಕಾರವೇ ಪ್ರಜ್ವಲಿಸಿತ್ತು
ತನು ಮನ ಘನದಲಿ ಕಾಣಾ
ಎನ್ನ ಮನದಲ್ಲಿ ಭರವಸೆಯ
ಬೆಳಕು ಮೂಡಿತ್ತು
ಆ ಚಿದ್ಬೆಳಕೆ ಲಿಂಗ ಜಂಗಮ
ಕಾಯಕ ದಾಸೋಹ ತತ್ವವೇ
ಭುವಿಯ ಗೆಲ್ಲುವ ಮಂತ್ರ
ಇದು ನಿನ್ನ ಕರುಣೆ ಕಾಣಾ
ಸಂಗನ ಬಸವಣ್ಣ
ನಿನ್ನ ವಚನ ಪ್ರಸಾದದಿಂದ
ನಾನು ಬದುಕಿದೆ ನೋಡ
ಬಸವ ದೀಪ ಪ್ರಿಯ
ಸೊಗಸಾಗಿ ಬಂದಿದೆ ಗಜಲ್ ಮೇಡಂ