ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಆರೋಪ
ವಾದಿಯೂ ನೀನೇ
ಪ್ರತಿ ವಾದಿಯೂ ನೀನೇ
ಆರೋಪ ಪ್ರತ್ಯಾರೋಪ
ಎಲ್ಲವೂ ನಿನ್ನದೇ….
ನ್ಯಾಯವಾದಿಯೂ ನೀನೇ
ನ್ಯಾಯಾಧೀಶನೂ ನೀನೇ
ತೀರ್ಪು ತೀರ್ಮಾನ ಎಲ್ಲವೂ ನಿನ್ನದೇ…
ಕಲ್ಲು ಹೃದಯ…..
ಕಟಕಟೆಯಲ್ಲಿ ಮೌನವಾಗಿ
ನಿಂತ ನಿರಪರಾಧಿ ನಾನು….
ಅಹವಾಲನ್ನು ಆಲಿಸುವರಾರಿಲ್ಲ….
ಅವಳು ದೇವತೆ….
ಅವನು ದೇವರು….
ಇವನೂ ದೇವರೇ…
ಹಾಗಾದರೆ
ನಾನು ಯಾರು?….
ಹಸುಳೆ ಹೃದಯದ
ಮುಗ್ಧಮಾತಿಗೆ ಗಂಭೀರ ಆರೋಪ…..
ಧನಾ ಧನ್ ಆರೋಪಗಳ ಪಟ್ಟಿ….
ಘಾಸಿಗೊಂಡ ಎದೆಯ ಅಳಲ
ಕೇಳುವರಾರಿಲ್ಲ…
ಮಂಜಿನ ಚೂರಿಯ ಇರಿತ….
ಮಾತಿನ ಮೊನೆಯ ಹರಿತ….
ಕಾಣದ ಗಾಯಗಳ ಆಳ ಬಲ್ಲವರಾರಿಲ್ಲ….
ನೋವಿನ ಸತ್ಯ ಭಾವಗಳ ಒರೆಸಲಾರೆ
ಅಳಿಸುವುದಿಲ್ಲ ಎಂದೆಯಲ್ಲಾ…
ನೀನು… ..ಹಾಗಾದರೆ
ಈ ಮೊದಲು ನೀ ಒರೆಸಿ ಒಗೆದ ಭಾವಗಳು
ಸುಳ್ಳೇ…ಹೇಳು…..
ಚೆನ್ನಾಗಿದೆ ಇಂದಿರಾ ಅವರೇ…. ತುಂಬಾ ಚೆಂದದ ಭಾವ, ಭಾಷೆ ನಿರೂಪಣೆ ಎಲ್ಲವೂ ಇಷ್ಟ ಆಯ್ತು.,..
ಧನ್ಯವಾದ ..