ಕಾವ್ಯಸಂಗಾತಿ
ಎ ಎಸ್. ಮಕಾನದಾರ
ದರ್ವೇಶಿ
ಬೇಡಿ ಕೊಳ್ಳುವೆ
ದರ್ವೇಶಿಯಾಗಿ
ಹಾಕುವದಾದರೆ ಹಾಕಿ ಬಿಡಿ
ಫಕೀರನ
ಚಮಲಾದೊಳಗೆ
ಮುಷ್ಠಿ ಬೆಳಗನು
ಆಡಿಸಬೇಕು
ಬೆರಳತುದಿಯಲಿ
ಕತ್ತಲೆಯನು
ಕತ್ತು ಹಿಸುಕಿ
ಸಾಯಿಸಬೇಕು
ದುಃಖವನು
ಕದಿಯದಿರಲಿ ಕಣ್ಣೀರ
ಕದಿಯದಿರಲಿ
ಸ್ವಪ್ನಗಳ
ಹಾಕಿಬಿಡಿ ಅರಿಷಡ್ವರ್ಗಗಳನು
ನನ್ನ ಹೆಗಲ ಮೇಲೆ ಹೊತ್ತು
ನಾನೇ ಸಾಗಿಸುವೆ
ಖಬರಸ್ಥಾನದೊಳಗೆ ಹೂತು ಬಿಡಿ ಚಾಚಾದಿರಲಿ
ಯಾರ ಕಾರಸ್ತಾನವೂ
ಫಕೀರನ ಚಮಲಾದೊಳಗೆ ಮುಷ್ಠಿ ಬೆಳಕು ಎಷ್ಟು ಅದ್ಭುತವಾದ ಸಾಲು!ಇಡೀ ಜಗವೇ ಬೆಳಕಿಗೆ ಹಪಹಪಿಸುತ್ತಿದೆ. ಹಿಡಿ ಬೆಳಕೇ ಜಗದ ಕತ್ತಲಿಗೆ ಉತ್ತರ. ಹಿಡಿ ಬೆಳಕು ತರುವವರಿಗೆ ದಾರಿ ಕೊಡಬೇಕಿದೆ. ಅದ್ಭುತವಾದ ಕವಿತೆ. ಅಭಿನಂದನೆಗಳು ಸರ್.
Nice poem
ಸೊಗಸಾದ ಕವಿತೆ ಸರ್. ಧನ್ಯವಾದಗಳು ನಿಮಗೆ
ಮಾರ್ಮಿಕವಾದ ಕವಿತೆ. ಓದಿ ಖುಷಿ ಆಯ್ತ ಸರ್