ಕಾವ್ಯ ಸಂಗಾತಿ
ಡಾ ಶಶಿಕಾಂತ
ಡಾ ಶಶಿಕಾಂತ ಪಟ್ಟಣ
ಭಾವ ಬಿತ್ತನೆ
ಹೆಂಟೆ ಮಣ್ಣಿನ ಭೂಮಿ
ಹದವಾದ ಉಳಿಮೆ
ತೆರೆದುಕೊಂಡಿತ್ತು ಮಣ್ಣು
ಭಾವ ಬಿತ್ತನೆಗೆ
ಹರವಿಕೊಂಡಿಹ ಮೋಡ
ಬಿರುಕು ನೆಲ
ಸುರಿವ ಸ್ಫೂರ್ತಿ ಸಿಂಚರ
ತೃಪ್ತವಾಯಿತು ಒಳ ಹೊರಗೆ
ಒಡಲು ತುಂಬಿದ ಬೀಜ
ಪಡಲೋಡೆದ ಜೀವ
ಎಳೆ ತೆನಸಿ ಪೈರು
ಭೂರಮೆ ಶೃಂಗಾರ
ಬಯಕೆ ಚಿಗುರೆಲೆ ಹಸಿರು
ಶಬ್ದ ಕಾವ್ಯದ ಬಸಿರು
ಕಿತ್ತೋಗೆದ ಭ್ರಾಂತಿ
ಸ್ನೇಹ ಸವಿ ಸಂಕ್ರಾಂತಿ
ಸರ್ ಚಂದದ ಕವಿತೆ
ಸು ಸುಂದರವಾದ ಭಾವ ಪುಷ್ಪ ಧನ್ಯವಾದಗಳು
ಅತ್ಯಂತ ಸುಂದರ ಭಾವ ಪೂರ್ಣ ಕವನ
Very meaningful poem
ಸೃಷ್ಟಿ ಮತ್ತು ಬದುಕಿನ ಸಮರಸದ ಅಧ್ಭುತ ಕಾವ್ಯ ಸರ್ ಓದಿ ತುಂಬಾ ಖುಷಿ ಆಯ್ತು ತಮಗೆ ಹಾಗೂ ಪ್ರಕಾಶಕರಿಗೆ ನನ್ನ ಅನಂತ ವಂದನೆಗಳು
Excellent feelings love and Emotions
Very emotional and meaningful poem
ಮಾರ್ಮಿಕ ಕವನ ಸರ್