ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ತರಹಿ ಗಜಲ್
ಅನಸೂಯ ಸಿದ್ಧರಾಮ ಮೇಡಮ್ ಅವರ ಮಿಶ್ರಾ
(ಕಾದೀನಿ ಹಗಲಿರುಳು…..)
ಚೂರ್ಚೂರ ನೋಡೀನಿ ಕಂಡಾರ ಕಂಡುಬಿಡು ಚೆಂದಾಗಿ
ಕಾದೀನಿ ಹಗಲಿರುಳು ಬಂದಾರ ಬಂದುಬಿಡು ಚೆಂದಾಗಿ
ಮೂಗ ನತ್ತಿನ ತಿರುಪ ಬಿಗಿ ಮಾಡೀನಿ ಮೂಗ ತಿರುವೀನಿ
ಹೆರಳಿಗೆ ಹೊನ್ನ ನಾಗರ ತಂದಾರ ತಂದುಬಿಡು ಚೆಂದಾಗಿ
ಬೆಳ್ಳಿಯ ಪೈಜಣ ಝಣ ಝಣ ರಿಂಗಣ ನಿನ್ನ ಹೆಸ್ರ ಕರೀತಾವ
ಚಿನ್ನದ ಝುಮಕಿ ಓಲಾಡತಾವ ಹಿಡಿದರ ಹಿಡಿದುಬಿಡು ಚೆಂದಾಗಿ
ಟೋಪ ಸೆರಗಿನ ಎದಿಮ್ಯಾಲ ತಲಿಯಿರಿಸಿ ಬಡಿತ ಎಣಿಸಬಾರ್ದೇನು
ಬಿಡದಂಗ ಬೆನ್ನ ಹಿಂದಿಂದ ಬಂದು ನಕ್ಕರ ನಕ್ಕುಬಿಡು ಚೆಂದಾಗಿ
ಕುಂತ್ರ ನಿಂತ್ರ ಒಂದ ಧ್ಯಾನ ಈ ಮನಸ್ನ್ಯಾಗ ಇಲ್ಲ ಸಮಾಧಾನ
ಹರಕಿ ಕೂಡೈತಿ ಅಂಗಣದಾಗ ನಿಂತರ ನಿಂತುಬಿಡು ಚೆಂದಾಗಿ
ಹೊಲದಾಗ ಬೆಳಿ ಐತಿ ತೆನಿ ತುಂಬಿ ತೂಗ್ತೈತಿ ಬೆಳಸಿ ಕರದೈತಿ ಬಾರಾ
ಹಾಕರಿಕಿ ನೆಲದಾಗ ಫೊಟೊಕ ಫೋಜ ಕೊಟ್ಟರ ಕೊಟ್ಟುಬಿಡು ಚೆಂದಾಗಿ
ದಾರಿ ದೂರಾದ್ರೇನು ಮನಸ ಕಲ್ತಮ್ಯಾಲ ಬಿಡಿಸದ ಅನುಬಂಧ ಅನು.
ಕಾಣದ ಎಳಿ ಎಳದು ತರ್ತದ ಸೇರ್ಯಾರ ಸೇರಿಬಿಡು ಚೆಂದಾಗಿ
ಪ್ರಾಸಭದ್ಧವಾಗಿ ಒಳ್ಳೆಯ ಕವನ
Thank you so much..!