ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ಭಾವ ತರಂಗ

ಅಂತರಂಗದ ಅಲೆಗಳಲ್ಲಿ
ತೇಲುತಿವೆ ಮೃದು ಭಾವಗಳು
ಬೆಚ್ಚಗೇ ತುಡಿಯುತಿವೆ
ಕಾಯುತಿವೆ ದಡ ಸೇರಲು

ಕಣ್ಣಂಚಿನ ಕನಸುಗಳಿಗೆ
ಅರಳಿ ನನಸಾಗುವ ಕಾತುರ
ತುಟಿಯಂಚಿನ ಮುಗುಳುನಗೆ
ಪಡುತಿದೆ ನಿನಗಾಗಿ ಸಾದರ

ಮಾತುಗಳು ಹೂತು ಹೋಗಿವೆ
ಒಡಳಾಳದ ತೊಳಲಾಟದಲಿ
ಎದೆಯ ತಮ್ಮಟ ಬಾರಿಸುತಿದೆ
ನಿರೀಕ್ಷೆಗಳ ಹೊಯ್ದಾಟಗಳಲಿ

ಸಪ್ತ ಸ್ವರಗಳು ನುಡಿಯುತಲಿವೆ
ಮನದಲಿ ಯುಗಳಗೀತೆ ಹಾಡುತ
ಎಬ್ಬಿಸುತಲಿವೆ ಭಾವ ತರಂಗಗಳ
ನೀ ಬರುವ ದಾರಿಯಲಿ ಕಾಯುತ


About The Author

4 thoughts on “ಪ್ರೊ ರಾಜನಂದಾ ಘಾರ್ಗಿ ಕವಿತೆ-ಭಾವ ತರಂಗ”

  1. Shivanand Aparaj

    ಭಾವಗಳನ್ನು ಭಟ್ಟಿಗಿಳಿಸಿ ಹಾಳೆಯ ಮೇಲೆ ತಂದಿದ್ದಕ್ಕೆ ಧನ್ಯವಾದಗಳು

Leave a Reply

You cannot copy content of this page

Scroll to Top