ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಮುಗಿಲಮಲ್ಲಿಗೆಯಾಗಿ

ನಗುತ್ತಿರು ಎಂದೂ..

ಸುಳಿದೆ ತಂಗಾಳಿಯಂತೆ
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ
ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವಾ ನೀ ಸೇರಲೆಂದೆ
ಬಯಕೆ ನೂರಾರು ತಂದೆ

ಅದೆಷ್ಟು ಚಂದಾಗಿ ನನ್ನ ಜೀವನದೊಳಗೆ ಬಂದುಬಿಟ್ಟೆಯಲ್ಲ, ತಂಗಾಳಿಯಂತೆ ಹಿತವಾಗಿ, ಸಂಗೀತದಂತೆ ಮಧುರವಾಗಿ. ಬಯಸದೆ ಬಂದವಳು ಬಯಕೆಗಳ ಸೆಲೆಯಾದೆ, ಒಲವಿನ ಸುಮವಾದೆ. ಪ್ರೀತಿಯೆಂಬ ಬಲೆಯಲ್ಲಿ ಬಂಧಿಸಿಬಿಟ್ಟೆ ನನ್ನ. ಆದರೆ ಅದೆಲ್ಲ ಕ್ಷಣಿಕವೆಂದು ನನಗೇನು ಗೊತ್ತಿತ್ತು? ಬಂದ ಹಾಗೇ ವೇಗವಾಗಿ ದೂರವೂ ಆಗಿಬಿಟ್ಟೆಯಲ್ಲ!
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ..

ನೀನು ಯಾರೆಂದೇ ತಿಳಿಯದೆ, ನಿನ್ನ ಮನಸ್ಸು ಏನೆಂದೇ ಅರಿಯದೆ ಹೃದಯದೊಳಗೆ ನಿನ್ನ ಬಿಟ್ಟುಕೊಂಡೆ. ನಾನು ನಿನ್ನ ಅದೆಷ್ಟು ಪ್ರೀತಿ ಮಾಡಿದೆ. ಆದರೆ ನೀನು ನನಗೆ ಇಂಥ ಒಂದು ಕರಾಳ ದಿನವನ್ನು ಕೊಟ್ಟುಬಿಟ್ಟೆಯಲ್ಲ…
ತುಝೆ ಬಿನ್ ಜಾನೆ ಬಿನ್ ಪೆಹೆಚಾನೆ
ಮೇನೆ ಹೃದಯ್ ಸೆ ಲಗಾಯ..

ಈ ವಿರಹದ, ವಿಷಾದದ ದಿನಗಳನ್ನು ನಾನು ಅದೆಷ್ಟು ನೋವಿನಿಂದ, ಕಣ್ಣೀರಿನಿಂದ ಕಳೆಯುತ್ತಿರುವೆ ನಿನಗೆ ಗೊತ್ತಾ? ಇಲ್ಲ, ನಿನಗೆ ಗೊತ್ತಿಲ್ಲ. ನಿನ್ನ ಹೃದಯವೂ ಒಂದ್ಯಾವುದೋ ಪ್ರೇಮಕ್ಕಾಗಿ ತಹತಹಿಸಬೇಕು, ಉರಿದು ಬೂದಿಯಾಗಬೇಕು. ಆಗಲೇ ನನ್ನ ಈ ನೋವು ನಿನಗರ್ಥವಾಗುವುದು..
ಜೆಸೆ ಬಿರಹಾ ಕಿ ಋತ್ ಮೇನೆ ಕಾಟಿ
ತಡಪ್ ಕೆ ಆಹೆ ಭರ್ ಭರ್ ಕೆ
ಜಲೆ ಮನ್ ತೇರಾ ಭೀ
ಕಿಸೀ ಕೆ ಮಿಲನ್ ಕೋ
ಅನಾಮಿಕಾ ತೂಭೀ ತರಸೇ
..

ಆಗ್ ಸೆ ನಾತಾ ನಾರಿ ಸೆ ರಿಶ್ತಾ
ಕಾಹೆ ಮನ್ ಸಮಝನಾ ಪಾಯಾ
ಮುಝೆ ಕ್ಯಾ ಹುವಾ ಥಾ..

ಹೆಣ್ಣಿನ ಸಂಗದಿಂದಲೇ ದೂರ ಇದ್ದವನು ನಾನು. ಬೆಂಕಿಯೊಡನೆ ಎಂದೂ ಸರಸವಾಡದವನು. ಇವೆರಡೂ ಎಂದೂ ಯಾರಿಗೂ ಅರ್ಥವಾಗದ ಸಂಬಂಧಗಳೇ. ಆದರಿಂದು ಬಕಿಯಂಥ ಈ ಮಾಯೆ ನನ್ನ ಸುಟ್ಟು ಹಾಕುತ್ತಿದೆ. ಇದೆಲ್ಲಾ ಯಾಕೆ ಹೀಗಾಯ್ತು? ಒಬ್ಬ ವಿಶ್ವಾಸದ್ರೋಹಿಯಲ್ಲಿ ನನಗೆ ಪ್ರೀತಿ ಹೇಗಾಯ್ತು? ಈಗ ನನಗಾಗಿರುವಂಥದೇ ದೈನ್ಯ ಸ್ಥಿತಿ ನಿನಗೂ ಆಗದೆ ಇದ್ದೀತಾ? ನೀನು ಹೋದಲ್ಲಿ ಬಂದಲ್ಲೆಲ್ಲಾ ನಿನ್ನ ನಂಬಿಕೆದ್ರೋಹವನ್ನು ಕಂಡು ಈ ಜಗತ್ತು ನಗದೇ ಇದ್ದೀತಾ? ಅನಾಮಿಕಾ, ನಿನಗೂ ನನ್ನಂತೇ ಹೃದಯ ಒಡೆಯದೇ ಇದ್ದೀತಾ?
ತೇರಿ ಬೇವಫಾಯಿ ಪೆ ಹಸೆ ಜಗ್ ಸಾರಾ
ಗಲಿ ಗಲಿ ಗುಝರೆ ಜಿಧರ್ ಸೆ..

ಸುಮವೇ ನೀ ಬಾಡದಂತೆ
ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ .
.


ನಿನಗೆ ನಾನು ಹಾಕುವ ಶಾಪವೂ ಸಹ ನಿನ್ನ ಪ್ರೀತಿಯಂತೆಯೇ ಕ್ಷಣಿಕ. ನಿನಗೆ ಅದಾವುದೂ ತಟ್ಟದೇ ಇರಲಿ. ನೀ ಯಾವತ್ತೂ ಬಿಸಿಲಿಗೆ ಬಾಡದ ಹೂವಾಗಿ ನೆರಳಲ್ಲೇ ನಗುತ್ತಿರು. ಬೆಂಕಿ ಬಿಸಿಲು ನನ್ನನ್ನಷ್ಟೇ ಸುಡಲಿ. ನೀನು ಅದೇಕೋ ಮೂಡಿದ ಪ್ರೀತಿಯನ್ನು ಮರೆತೇ ಬಿಟ್ಟಿರುವೆ. ಕಾರಣ ನನಗೆ ಗೊತ್ತಿಲ್ಲ. ಆದರೆ ಅದು ನಿನಗೆ ಒಪ್ಪಿತವೇ ಇರಬಹುದು. ನಿನಗದು ಅನಿವಾರ್ಯವೂ ಇರಬಹುದು. ಅದಕ್ಕೇ ಇಂಥ ಒಂದು ಸುಂದರ ಅನುಭವ ಕೇವಲ ಕನಸೆಂದು ಮರೆತುಬಿಡುವೆ ನಿನಗಾಗಿ, ಕೇವಲ ನಿನ್ನ ಒಳಿತಿಗಾಗಿ.
ಕನಸಲಿ ನೋಡಿದ ಸಿರಿಯನು ಮರೆವೆ

ನಿನಗಾಗಿ ನನಗಾಗಿ…

ನೀನು ನನ್ನೊಲವಿನ ಹೂವೆಂದು ತಿಳಿದಿದ್ದೆ. ಆದರೆ ನೀ ಮುಗಿಲಮಲ್ಲಿಗೆ ಎಂದು ಎಷ್ಟು ಬೇಗ ತಿಳಿಸಿಕೊಟ್ಟೆ! ನಿನಗಿದ್ದದ್ದು ಒಲವಾ, ಹಟವಾ, ಸೇಡಾ ಒಂದೂ ತಿಳಿಯುತ್ತಿಲ್ಲ. ಆದರೂ ನೀನು ಕೆಂಪುಗುಲಾಬಿಯಾಗಿ ಯಾವಾಗಲೂ ನಗುತ್ತಿರು ಎಂದು ಮನದಾಳದಿಂದ ಹಾರೈಸುವೆ.
ನಿನಗೆ ನನ್ನಲ್ಲಿ ಒಲವೋ
ಅರಿಯೇ ನನ್ನಲ್ಲಿ ಛಲವೋ
ನಲಿವಾ ಗುಲಾಬಿ‌ ಹೂವೆ
ಮುಗಿಲ ಮೇಲೇರಿ ನಲಿವೆ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top