ವಿಶೇಷ ಲೇಖನ
ಇಂಗ್ಲೀಷ್ ಮೂಲ: ಜೀನ್ ಪಾಲ್ ಸಾರ್ತೃ
ಕನ್ನಡಕ್ಕೆ: ಕೆ ವಿ ನಾರಾಯಣ
ಒಂದು ಟಿಪ್ಪಣಿ
ಚನ್ನವೀರಯ್ಯ ಹಿರೇಮಠ
ಬುದ್ಧಿಜೀವಿ ಬಿಕ್ಕಟ್ಟುಗಳು
A Plea For ntellectuals)
: ಇತ್ತೀಚೆಗೆ ನನ್ನ ಕನ್ನಡ ಸಾಹಿತ್ಯದ ಓದಿನ ಅವ್ಯಾಸದ ಬಾಗವಾಗಿ ಬುದ್ಧಿಜೀವಿ ಬಿಕ್ಕಟ್ಟುಗಳು ( A Plea For Intellectuals) ಎಂಬ ಒತ್ತಿಗೆಯನ್ನು ಓದಿದೆ. ಮೂಲವಾಗಿ ಈ ಕೃತಿಯನ್ನು ರಚಿಸಿರುವರು – ಜೀನ್ ಪಾಲ್ ಸಾರ್ತೃಯವರು. ಇದನ್ನು ಕೆ ವಿ ನಾರಾಯಣ ರವರು ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
ಸಾರ್ತೃಯವರ ಈ ಪುಸ್ತಕ ಮೂಲತ ಒಂದು ಭಾಷಣವಾಗಿದ್ದು , ಅದನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಸಮಾಜದಲ್ಲಿನ ಬುದ್ಧಿಜೀವಿಗಳ ಬಗ್ಗೆ ಹೇಳುವ ಈ ಪುಸ್ತಕ ಬುದ್ಧಿಜೀವಿಗಳೆಂದರೆ ಯಾರು? ಅವರು ಹೇಗೆ ಹುಟ್ಟಿಕೊಳ್ಳುತ್ತಾರೆ? ಏಕೆ ಹುಟ್ಟಿಕೊಳ್ಳುತ್ತಾರೆ? ಅವರ ಬಿಕ್ಕಟ್ಟುಗಳೇನು ? ಎನ್ನುವ ಅನೇಕ ಗಂಭೀರ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಹೋಗುತ್ತಾರೆ. ಆಳುವ ವರ್ಗ ಮತ್ತು ಬುದ್ಧಿ ಜೀವಿಗಳ ನಡುವಿನ ಸಂಬಂಧದ ಬಗ್ಗೆ, ಹಾಗೆ ಪ್ರಭುತ್ವ ಹೇಗೆ ಅವರನ್ನು ಉಪಯೋಗ ಮಾಡಿಕೊಳ್ಳುತ್ತದೆ ಎಂಬುವುದು ಸೂಕ್ಷ್ಮವಾಗಿ ಹೇಳಲಾಗಿದೆ.
ಬುದ್ಧಿಜೀವಿಗಳನ್ನು ಸಮಾಜವೇ ಸೃಷ್ಟಿ ಮಾಡುತ್ತದೆ ಮುಂದೆ ಸೃಷ್ಟಿ ಮಾಡಿದ ಸಮಾಜವೇ ಅವರನ್ನು ನಂಬದೆ ಸಂಶಯವಾಗಿ ಕಾಣತೋಡುಗುತ್ತದೆ. ಹಾಗೆ ಬುದ್ಧಿಜೀವಿಗಳು ಯಾರ ಸಲುವಾಗಿ ಹೊರಾಡುತ್ತಿರುತ್ತಾರೊ ಆ ಜನರ ನಂಬಿಕೆ ಕೂಡ ಸಂಪೂರ್ಣವಾಗಿ ಗಳಿಸಿಕೊಳ್ಳಲು ಕಷ್ಟಪಡುವಂತಾಗುತ್ತದೆ. ಇವರನ್ನು ಬೆಳಸಿದ ಆಳುವ ವರ್ಗವು ಇವರನ್ನು ಅಂತರದಲೇ ಇಟ್ಟಿರುತ್ತದೆ, ಕಾರಣವಿಷ್ಟೇ ಬುದ್ಧಿಜೀವಿಗಳು ಪ್ರಶ್ನೆ ಮಾಡುವುದೇ ಪ್ರಭುತ್ವ ವರ್ಗದ ವಿರುದ್ಧವಾಗಿರುತ್ತದೆ. ಹೀಗಾಗಿ ಹಲವು ಸಂದರ್ಭದಲ್ಲಿ ಯಾರನ್ನು ನಂಬದೆ ಒಬ್ಬೊಂಟಿಗಳಾಗಿ ಬುದ್ಧಿಜೀವಿಗಳು ನಿಲ್ಲುವ ಸ್ಥಿತಿ ಬರುವಂತಾಗುತ್ತದೆ ಎಂಬುದು ದಾಖಲಿಸಿದ್ದಾರೆ.
ಮುಂದೆ ಈ ರೀತಿಯ ಬಿಕ್ಕಟ್ಟುಗಳಿಂದ ಹೇಗೆ ಕಳಚಿಕೊಳ್ಳಬೇಕು, ತಾವು ಯಾರ ಸಲುವಾಗಿ ದ್ವನಿ ಎತ್ತುತ್ತಿರುತ್ತಾರೋ ಅವರ ನಂಬಿಕೆ ಹೇಗೆ ಗಳಿಸಿಕೊಳ್ಳಬೇಕು ಎನ್ನುವದರ ಬಗ್ಗೆ ಮಾತನಾಡುತ್ತಾರೆ.
ಸಾರ್ತೃಯವರೆ ಹೇಳುವಂತೆ “ಆಳುವ ವರ್ಗವು ತನ್ನ ಯಾಜಮಾನಿಕೆಯನ್ನು ಕಾಯ್ದುಕೊಳ್ಳಲು ಪಾರಂಪರಿಕ ನೆಲೆಗಳು, ಪುರಾಣಗಳು, ಸಂಪ್ರದಾಯಗಳು, ಸಂಸ್ಕೃತಿ ಇವೆಲ್ಲವೂಗಳನ್ನು ತನಗೆ ಬೇಕಿರುವಂತೆ ಬಳಸಿಕೊಳ್ಳುತ್ತದ್ದೆ. ಹೀಗೆ ಮಾಡುವ ಮೂಲಕ ಸಮಾಜದಲ್ಲಿರುವ ಅನೇಕ ಸಮುದಾಯದಳ ನಡುವೆ ಇರುವ ತಿಕ್ಕಾಟವನ್ನು ನಿರ್ವಹಿಸಲು ಬಗೆಬಗೆಯ ಹುನ್ನಾರಗಳನ್ನು ಮಾಡುತ್ತದೆ”.
ಬುದ್ಧಿಜೀವಿ ಆಗುವ ಮೊದಲು ಅವರು ಒಂದು ವಿಷಯದಲ್ಲಿ ತಜ್ಞರಾಗಿರುತ್ತಾರೆ , ಅವರಿಗೆ ಅವರ ಮಾತು, ಅಭಿಪ್ರಾಯ ಅಧಿಕೃತಗೊಳಿಸುವ ಅಧಿಕಾರ ದೊರಕಿರುತ್ತದೆ, ಆದರೆ ಒಂದು ಬಾರಿ ಅವರು ಬುದ್ಧಿಜೀವಿಗಳಾಗಿ ಹೊರಹೊಮ್ಮಿದ ಮೇಲೆ ಅವರು ಆ ಅಧಿಕಾರ ಕಳೆದುಕೊಳ್ಳುತ್ತಾರೆ. ಆಗ ಬುದ್ಧಿಜೀವಿಗಳ ಮಾತು ಅಧಿಕೃತಗೊಳಿಸುವ ಅಧಿಕಾರ ಇರುವುದಿಲ್ಲ ಎಂದು ಹೇಳುತ್ತಾರೆ.
ಹೀಗೆ ಹಲವಾರು ಸಂಗತಿಗಳ ಬಗ್ಗೆ ಪುಸ್ತಕದಲ್ಲಿ ಚರ್ಚೆ ದಾರಿ ಮಾಡಲಾಗಿದೆ. ಬುದ್ಧಿಜೀವಿಗಳ ಅರ್ಥ, ಬುದ್ಧಿ ಜೀವಿಗಳ ಒಡಕುಗಳು, ಸಾಧನಗಳು, ಪರಿಹಾರಗಳು ಎಲ್ಲವೂ ಸೇರಿರುವ ಈ ಪುಸ್ತಕವು ಮಹತ್ವದಾಗಿದೆ.
ಬುದ್ಧಿಜೀವಿಗಳು ಮತ್ತು ಹುಸಿ ಬುದ್ಧಿಜೀವಿಗಳು ಯಾರು ಅವರ ಲಕ್ಷಣಗಳೂ ಏನು ಎನ್ನುವ ಕುರಿತು ಚನ್ನಾಗಿ ವಿವರಿಸಲಾಗಿದೆ.
ಬಹಳ ಕಡಿಮೆ ಪುಟಗಳಲ್ಲಿ ತುಂಬಾ ಗಾಢವಾದ, ಆಳವಾದ, ವಿಷಯ ಮಂಡನೆ ಮಾಡಲಾಗಿದೆ. ಓದುಗನಿಗೆ ತೀಕ್ಷ್ಣವಾದ ಆಲೋಚನೆಗೆ ಒಳಪಡಿಸುವ ಕೃತಿ ಇದಾಗಿದೆ.
ಚನ್ನವೀರಯ್ಯ ಹಿರೇಮಠ