ಮಕ್ಕಳ ಕವಿತೆ

ಅರುಣಾ ರಾವ್

ಇರುವೆ

ಇರುವೆ ಇರುವೆ ಕಟ್ಟಿರುವೆ
ಸರಸರ ಎನುತ ಎಲ್ಲಿಗೆ ನಡೆವೆ?

ಸಾಲಲಿ ಎಲ್ಲಿಯೂ ತಪ್ಪದೆ ಬರುವೆ
ಶಿಸ್ತಲಿ ಸಿಪಾಯಿಯ ಮೀರಿಸಿ ಬಿಡುವೆ
ಬಾಳಲಿ ಅನುದಿನ ಶ್ರಮವನು ಪಡುವೆ
ಹಗಲಿರುಳೆನ್ನದೆ ದುಡಿಯುತಲಿರುವೆ|

ಕಾಯಕ ತತ್ವವ ಅನುಸರಿಸಿರುವೆ
ಕೂಡಿ ಬಾಳುವ ಮಂತ್ರವ ಜಪಿವೆ
ಸೋಲನೆಂದಿಗೂ ಒಪ್ಪದೆ ನಡೆವೆ
ಕಾಯಕ ಕುಲಕೆ ನೀ ಆದರ್ಶವೆ|

ಸಿಹಿಯನು ಕಂಡರೆ ಸಂತಸ ಪಡುವೆ
ಅಡೆತಡೆಗಳನು ಎದುರಿಸಿ ನಡೆವೆ
ಮಣ ಭಾರವ ನೀ ಕ್ಷಣದಲಿ ಹೊರುವೆ
ನಿನ್ನಡಿಯಲಿ ನಾ ಸಾಗುತ ನಲಿವೆ|

ant

One thought on “

  1. Fantastic illustration of an ants life .We so called superior beings still need to learn from such small lives.Duty ,Dignity and Discipline ,the instinctive behavior of ants is well portrayed in your poem . lot of applause continue to enlighten children with such beautiful exemplary that will make them not only love life on earth but become virtuous.

Leave a Reply

Back To Top