ಈರಪ್ಪ ಬಿಜಲಿ ಕೊಪ್ಪಳ ಕವಿತೆ-ನೇಕಾರನ ಕ(ವ್ಯ)ಥೆ

ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ನೇಕಾರನ ಕ(ವ್ಯ)ಥೆ

ಒಂದು ಅಣಿ ತಪ್ಪಿದರೆ
ಸಾವಿರ ಅಣಿ ತಪ್ಪಿದಂತೆ
ಹಿರಿಯರ ಅನುಭವದಲ್ಲಿದೆ
ನೇಕಾರನ ಬದುಕಿನ ಕಂತೆ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ದಾರ ದಾರ ಕೂಡಿ
ಚೂಡಿ ದಾರ ಮಾಡಿ
ಝರಿ ಝರಿ ಕೂಡಿ
ನಾರಿ ಸೀರೆ ಮಾಡಿದವ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ನೋವು ನೋವು ನುಂಗಿ
ನೇಯ್ದ ಹೊಸತು ಲುಂಗಿ
ಮಾನ ಕಾಯ್ವ ಅಂಗಿ
ಕೊಟ್ಟು ಅವನಾದ ಕಮಂಗಿ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ಪ್ರಾಣಕಿಂತ ಮಾನ ಮುಖ್ಯ
ಜಗವು ಇರಲಿ ಸದಾ ಸೌಖ್ಯ
ಧಾರೆ ಸೀರೆ ಕೊಟ್ಟನೀತ
ಕನ್ಯಾ ಸಿಗದೆ ನೊಂದನೀತ
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!

ದೇವ ದಾನವರಿಗೆ ವಸ್ತ್ರ ನೀಡಿ
ಮಡಿ ಪಿತಾಂಬರ ವಿಪ್ರರಿಗೆ ನೀಡಿ
ದೇವರು ದೇವಲ ಋಷಿಯ ನೋಡಿ
ದೇವಾಂಗ ಕುಲವೆಂದು ಬಿರುದು ನೀಡಿ
ದೇವಲೋಕ ಮೆಚ್ಚಿದಂಥ ನೇಕಾರನಿಂದು
ವಸ್ತ್ರದಾನ ಮಾಡಿ ವಿವಸ್ತ್ರನಾದ ನೇಕಾರ!!


One thought on “ಈರಪ್ಪ ಬಿಜಲಿ ಕೊಪ್ಪಳ ಕವಿತೆ-ನೇಕಾರನ ಕ(ವ್ಯ)ಥೆ

Leave a Reply

Back To Top