ಪ್ರೊ ರಾಜನಂದಾ ಘಾರ್ಗಿಯವರ ಹೊಸ ಗಜಲ್

ಕಾವ್ಯ ಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ಗಜಲ್

ಕಣ್ಣುಗಳಲ್ಲಿ ಬಣ್ಣ ತುಂಬುವ ಕನಸುಗಳ ಹುಡುಕುತಿರುವೆ
ಬೆಚ್ಚನೆಯ ಭಾವಗಳ ಬಿಚ್ಚಿಡುವ ಮನಸುಗಳ ಹುಡುಕುತಿರುವೆ

ಬದುಕಿನ ಜಾತ್ರೆಯಲಿ ಕಳೆದು ಹೋಗುತಲಿವೆ ಸಂಬಂಧಗಳು
ಮನಗಳನು ಬೆಸೆಯುವ ಕೊಂಡಿಗಳಾಗುವ ಭಾವಗಳ ಹುಡುಕುತಲಿರುವೆ

ವಾಸ್ತವಿಕತೆಯ ಆರ್ಭಟದಲ್ಲಿ ಕೇಳದಾಗಿದೆ ಮನದ ಮೃದು ಮಾತು
ಮಾನವೀಯತೆಗೆ ಬಲ ನೀಡುವ ಆಶಯಗಳ ಹುಡುಕುತಿರುವೆ

ಮಹತ್ವಾಕಾಂಕ್ಷೆಗಳ ವೇಗಕೆ ಕಂಪಿಸಿ ಸೋಲುತಿದೆ ಜೀವನ
ಉತ್ಕರ್ಷಣೆಯ ನಿಯಂತ್ರಿಸುವ ಸ್ಪಂದನಗಳ ಹುಡುಕುತಿರುವೆ

ಪೋಷಿಸಬೇಕಿದೆ ಪ್ರೀತಿ ಶಾಂತಿ ಸಂಯಮಗಳ ತುಂಬಿ ಕಣಕಣದಲಿ
ರಾಜಿಯ ಮನ ಕದಡುತಿರುವ ತಲ್ಲಣಗಳ ಹುಡುಕುತಿರುವೆ

————————-


ಪ್ರೊ ರಾಜನಂದಾ ಘಾರ್ಗಿ

Leave a Reply

Back To Top