ಯುಗಾದಿ ವಿಶೇಷ

ಲಲಿತಾ ಮ ಕ್ಯಾಸನ್ನವರ

ಯುಗಾದಿ

ಹೊಸ ಸಂತಸ ಸಾಂಗತ್ಯದ
ಸಂಭ್ರಮದ ಯುಗಾದಿಯ ಬರುವಿಕೆ
ವಸಂತ ಋತುವಿನ ರಾಜಗಾಂಭಿರ್ಯದಿ
ಎಲ್ಲ ಹಬ್ಬಗಳ ತಳಪಾಯ ಹಾಕಲಿಕೆ

ಪ್ರತಿಸಂವತ್ಸರದ ಚೈತ್ರ ಮಾಸದ ಶುಕ್ಲಪಕ್ಷ
ಪಾಡ್ಯದ ದಿನ ರಾಮನುದಿಸಿದ ಸುದಿನ
ಮಿಹೀರಾಚಾರ್ಯರು ಪ್ರಾರಂಭಿಸಿದ
ಯುಗದಾದಿ ಯುಗಾದಿಯ ದಿನ

ನಾಲ್ಕು ಯುಗದಿ ವರ್ಷದ
ಹಗಲು ರಾತ್ರಿ ಸಮನಾದ ದಿನ
ದ್ವಾಪರ ಕಳೆದು ಕಲಿಯುಗ
ಆರಂಭವಾದ ಸುದಿನ ಈದಿನ

ಸೂರ್ಯನುದಯದಿ ಎದ್ದು
ಅಭ್ಯಂಗ ಮುಗಿಸಿ ಬೇವು ಬೆಲ್ಲ
ಹೊಸ ಪಂಚಾಗ ಪೂಜಿಸಿ ತಂದೆ
ತಾಯಿ ಗುರುಹಿರಿಯರಿಗೊಂದಿಸಿ

ನವ ಚೈತನ್ಯ ತುಂಬುವ ಯುಗಾದಿ
ಸುಖದುಃಖ ನೋವು ನಲಿವುಗಳನ್ನು
ಪ್ರೀತಿ ವಿಶ್ವಾಸ ತ್ರುಪ್ತಿ ಹೊಂದಾಣಿಕೆಯ
ಹಾದಿಯುದ್ದಕ್ಕೂನೀಡಲಿ ಈ ಯುಗಾದಿ

ದ್ವಿ ತಿಥಿ ನಕ್ಷತ್ರ ವಾರ ಪಕ್ಷ ಮಾಸ
ಋತು ಆಯಣ ಸಂವತ್ಸರವ
ಸಂಧಿಸುವ ಚಾಂದ್ರಮಾನ ಸೇರುವ
ಪರ್ವಕಾಲ ಈ ಯುಗಾದಿ


Leave a Reply

Back To Top