ಯುಗಾದಿ ವಿಶೇಷ
ರೋಹಿಣಿ ಯಾದವಾಡ
ಹಾಯ್ಕುಗಳು
೧) ವಸಂತ ಋತು
ಹಸಿರು ತೋರಣದಿ
ಸ್ವಾಗತಿಸಿದೆ
೨) ಯುಗಾದಿ ಹಬ್ಬ
ಸೃಷ್ಠಿಯ ಸೊಬಗಿಗೆ
ಕಳೆಗಟ್ಟಿದೆ
೩) ನಾಂದಿಯ ಹಾಡು
ಬದುಕಿನ ನಾಳೆಗೆ
ಹರುಷದಲಿ
೪) ಬೇವು ಬೆಲ್ಲವ
ಬೆರೆಸಿ ಸವಿಯಲು
ಯುಗಾದಿ ಹಬ್ಬ
೫) ತರುಲತೆಗೂ
ಹೊಸ ಕಳೆ ತಂದಿತು
ನವ ಮಾಸವು
೬) ಸಂಭ್ರಮವಿದು
ಚೈತ್ರದ ಚಿಗುರಲಿ
ಹಸಿರು ಹುಟ್ಟಿ
೭) ಎಲ್ಲೆಂದರಲ್ಲಿ
ನಲಿವಿನ ಸಂತಸ
ಚೈತ್ರ ಮಾಸದಿ
೮) ಹಸಿರುಸಿರು
ನವ ಮನ್ವಂತರಕೆ
ಮಹದಾನಂದ
೯) ಪ್ರಕೃತಿ ಸಿರಿ
ಭೂರಮೆಯ ಮಡಿಲು
ತುಂಬಿಕೊಂಡಿತು
೧೦) ಬೇವು ಬೆಲ್ಲವ
ಮೆದ್ದು ಮರೆಯಿಸಿತು
ಕಷ್ಟ ಕಾಲವ
೧೧) ಹೊಸ ಚಿಗುರು
ಕನಸೊಂದು ಮೀಟುತ
ಮರಳಿ ಬಂತು
೧೨) ಒಳ ತುಡಿತ
ಹೊರಗಿನ ಮಿಡಿತ
ಮೇಳೈಸಿತಿಲ್ಲಿ
೧೩) ಚೈತ್ರ ವೈಭವ
ಚಿಗುರಿನ ಬಣ್ಣದಿ
ಹಸಿರನುಟ್ಟು
೧೪) ಪಾರಿಜಾತ ಹೂ
ನೆಲದಲ್ಲಿ ಹಾಸಿದ
ಚಿತ್ತಾರ ಮೂಡಿ
=—————–