ಯುಗಾದಿ ವಿಶೇಷ
ಡಾ ಡೋ.ನಾ.ವೆಂಕಟೇಶ
ಆದಿ
ಶುಭಕೃತ
ಅರವತ್ತು ವರ್ಷಗಳಿಗೊಮ್ಮೆ
ನಿರಂತರ !
ಈ ಯುಗಾದಿಯಲ್ಲೂ ಹಾಡು
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ “
ಯುಗದ ಆದಿಯಿಂದ
ಹೊಸತು ಹೊಸತು ಮೊಳೆತಿದೆ
ಹೊಸ ಹೊಸ ಹರುಷದ
ಚಿಗುರು ಪುವಾಸನೆ ಬೆಳೆದಿದೆ
ದಾರಿಗುಂಟ ಬಣ್ಣ ಬಣ್ಣದ
ಗುಲ್ ಮೊಹರ್ ಚಿತ್ತಾರ
ರಂಗೋಲಿ ಬಿಡಿಸಿದೆ
ಮೋಹಕ ಎಳೆಮಾವಿನ ಬೆಳೆ
ಸಂಭ್ರಮಿಸಿದೆ
ಜೊತೆಯಾಗೇ ಬೇವಿನೆಳೆ ಹೂ ತನ್ನಿರವ ಸಾರಿದೆ
ಯುಗಾದಿಯ ಆದಿಯಿಂದ
ಅಂತ್ಯದ ನೆನೆಪಿಸಿದೆ
ಬೆಲ್ಲದ ಜೊತೆಗಿನ ಬೇವು ಉಲ್ಲಾಸದ ನಂತರದ ಜೀವನ ಚಕ್ರ
ಸಿಹಿಯ ಜೊತೆಗಿನ ಕಹಿ
ಸಂಧ್ಯಾಕಾಲದ ನೆನಪು
ಒನಪುಗಳ ಝಲಕು!
ಮತ್ತೊಂದು ಹೊಸ ವರ್ಷ
ಹೊಸತಾಗಿ ಹಳೆ ಹರ್ಷ
ನಿರಂತರವಾಗಿದೆ
ಹಳೆ ಹೊಸತಿನ
ಸುಖ ದು:ಖದ
ಸನ್ಮಾನ ಸಂಘರ್ಷದ
ಯುಗ ಯುಗಾದಿಯ
ಆದಿ !
ಸ್ವಾಗತ
ಸುಸ್ವಾಗತ !!
———————–
ಹೊಸ ವರ್ಷದ ಶುಭಾಶಯಗಳು
Happy New year Smitha
ಸುಂದರ ಕವಿತೆ ಈ ವಸಂತ ಕಾಲವನ್ನು ಚೆನ್ನಾಗಿ ಬಣ್ಣಿಸಿ ರಚನೆ . ಯುಗಾದಿ ಹಬ್ಬದ ಶುಭಾಶಯಗಳು
Beautifully written ❤️
Happy Ugadi
Thank you and a very fruitful new year ahead!
ಯುಗಾದಿ ಹಬ್ಬದ ಈ ಸಂಭ್ರಮದಲ್ಲಿ ನಿಮ್ಮಸುಂದರವಾದ ಕವಿತೆಯನ್ನು
ಓದಿ ಬಹಳ ಸಂತೋಷವಾಯಿತು.
ಧನ್ಯವಾದಗಳು.
ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮ ಸುಂದರ ಕವಿತೆ ಮನಸ್ಸಿಗೆ ಆಹ್ಲಾದ ಉಂಟು ಮಾಡಿದೆ.
Nice and meaningful song about Ugadi. Congratulations, Venkatesh.
Thank you very much!