ಯುಗಾದಿ ವಿಶೇಷ

ಲಲಿತಾ ಪ್ರಭು ಅಂಗಡಿ

ನಲ್ಲ ನಲ್ಲೆ

ನಲ್ಲೆಯಿಟ್ಟ ಮೂಗಿನ ನತ್ತು
ನಲ್ಲನ ಮನಸೆಳೆದಿತ್ತು
ಕಣ್ಸನ್ನೆಯ ಅವನ ನೋಟಕೆ
ಗಲ್ಲ ನಾಚಿ ನೀರಾಗಿತ್ತು
ಮೈಮನವೆಲ್ಲ ರಂಗೇರಿತ್ತು
ರಂಗೇರಿದ ನಲ್ಲೆಯ ಗಲ್ಲಕೆ
ನಲ್ಲ ಮುತ್ತೊಂದು ಕೊಡುವಷ್ಟರಲಿ
ನಲ್ಲೆಯ ಅತ್ತೆಯ ಎಂಟ್ರಿಯಾಗಿತ್ತು
ಅತ್ತೆಯ ಸಿಟ್ಟಿನ ಬಿರಿಬಿರಿ ನೋಟಕೆ
ಮೂಗಿನ ನರ್ತನ ನಾಂದಿ ಹಾಡಿತ್ತು
ನಲ್ಲನ ನಡುಕ ನಾಟ್ಯವಾಡಿತ್ತು
ಘಾಸಿಗೊಂಡ ನಲ್ಲೆಯ ಸಿಟ್ಟು ಜೋರಾಗಿತ್ತು
ಬಡಪಾಯಿ ನಲ್ಲನ ಸಂಕಟ ಇಲಿಯಂತಾಗಿತ್ತು
ರಾತ್ರಿಯ ಊಟದ ತಾಟಲಿ ಎಸೆವ
ಚಪಾತಿ ಹಿಡಿವ ನಲ್ಲನ ಕೈ ಸೋತೆ ಹೋಗಿತ್ತು
ಅಮ್ಮಾವ್ರ ಗಂಡನ ಪರಿಸ್ಥಿತಿಯಂತೂ
ಫಜೀತಿಗೆದ್ದಿತ್ತು
ಗಂಡ ಹೆಂಡಿರ ಜಗಳ ಉಂಡು ಮಲಗುವತನಕ ಎನ್ನುವ ಮಾತು ಸುಳ್ಳಾಗಿಬಿಟ್ಟಿತ್ತ
ಬೆಳಗಿನ ಪಾತ್ರೆಯ ಸದ್ದಿನ ಮೊಳಗು
ಗಂಟೆಯ ಹೊಡೆದಿತ್ತು
ಗಂಡಹೆಂಡಿರ ಜಗಳದ ಮೋಜು
ಪಕ್ಕದ ಮನೆ ಪದ್ಮಳ ಕಿವಿಗೆ ಕಾತುರವಾಗಿತ್ತ
ಎದುರಿನ ಮನೆಯ ಹೇಮಾಳಿಗೆ ಮಜಾತಂದಿತ್ತು
ನಲ್ಲ ನಲ್ಲೆಯರ ಇರಿಸು ಮುನಿಸು ಜಾಸ್ತಿಯಾಗಿತ್ತು
ನಲ್ಲನು ಆಫೀಸಿಗೆ ಹೋಗೋ ವೇಳೆ ತರಾತುರಿಯಾಗಿತ್ತ
ಷರ್ಟನು ಹಾಕಿಕೊಂಡ ನಲ್ಲನು
ಪ್ಯಾಂಟ್ ಉಡುವುದು ಮರೆತೆಬಿಟ್ಟಿದ್ದ
ಗಡಿಬಿಡಿಯಲಿ ಬ್ಯಾಗ್ ಹಿಡಿದು ಹೊರಟೆ ಬಿಟ್ಟಿದ್ದ
ಬಿದ್ದು ಬಿದ್ದು ನಗುವ ಜನರ ಬೀದಿಲಿ ಕಂಡಿದ್ದ
ತನ್ನ ತಾನು ನೋಡಿಕೊಂಡು ನಾಚಿಕೆಪಟ್ಟಿದ್ದ
ಅವಸರದ ಅವಾಂತರ ಕಂಡು ಖಿನ್ನನಾಗಿದ್ದ
ಆತುರದೊಳಗಿನ ಆಫೀಸಿನ ಕೆಲಸ
ಕಂಗಾಲಾಗಿತ್ತ
ಮೇಲ್ ಕಳಿಸುವ ಅವಸರದಲ್ಲಿ
ಭಾಸ್ ಗೆ ಕಳಿಸುವ ಲೆಟರನು ನಲ್ಲೆಗೆ ಕಳಿಸಿ
ನಲ್ಲೆಗೆ ಕಳಿಸುವ ಲೆಟರ್ ಭಾಸ್ ಗೆ ಕಳಿಸಿ
ಕಳವಳಗೊಂಡಿದ್ದ
ನಲ್ಲೆಯ ಮುನಿಸು ನಲ್ಲನ ಮನಸನು
ಗಡಿಬಿಡಿಗೊಳಿಸಿತ್ತ
ಜಗಳದಿ ನೆವದಿ ನಲ್ಲೆಯ ಡಿಮ್ಯಾಂಡ್ ದುಬಾರಿಯಾಗಿತ್ತ
ಯುಗಾದಿ ಹಬ್ಬಕೆ ನಲ್ಲನ ಜೇಬಿಗೆ ಕತ್ತರಿಯಂತು ಬಿದ್ದೆ ಬಿಟ್ಟಿತ್ತ
ನಲ್ಲನಲ್ಲೆಯರು ಕೂಡಿಕೊಂಡು
ತಿದ್ದಿಕೊಂಡರು ತಪ್ಪನು ತೀಡಿ
ಗಂಡ ಹೆಂಡಿರ ಜಗಳ ಗಂಧತೀಡಿದಂಗ
ಬೇವು ಬೆಲ್ಲದಂಗ
ಇರಬೇಕು ಆಂತಾ ತಿಳಕೊಂಡ್ರು ನೋಡ್ರಿ.—


   ಲಲಿತಾ ಪ್ರಭು ಅಂಗಡಿ 

One thought on “

Leave a Reply

Back To Top