ಯುಗಾದಿ ವಿಶೇಷ
ಅಕ್ಷತಾ ಜಗದೀಶ.
ಯುಗಾದಿ ಸಂಭ್ರಮ
ಯುಗದ ಆದಿಗೆ ಸ್ವಾಗತಕೋರಿ
“ಚೈತ್ರ ಮಾಸ”ದ ಸುಗ್ಗಿ
ಗೆಜ್ಜೆ ಕಟ್ಟಿ ತಾ ಕುಣಿದಿದೆ
ನವ ಸಂವತ್ಸರದ ಆಗಮನಕೆ…
ಚಿಗುರೆಲೆಯೊಳು ತಾ ಮೆರೆದಿದೆ
ಸಹ್ಯಾದ್ರಿಯ ಸಾಲುಗಳು
ಕಡಲಿನಲೆಗಳ ನೃತ್ಯವದು
ಚುಂಬಿಸುತಲಿದೆ ಬಾನಂಚಿನ
ರವಿ ಕಿರಣಗಳಿಗೆ
ನವೋಲ್ಲಾಸದ ಕ್ಷಣಕೆ…
ಹೊಸ ಋತುವಿನ ಆಗಮನಕೆ
“ವಸಂತ “ಗಾನದ ಕಳೆತುಂಬಿತು
ಕೋಗಿಲೆಯ ಮಧುರ ನಾದ…
ನವ ಕನಸುಗಳು ಸಾಗಲಿ
ಹೊಸ ದಿಗಂತದೆಡೆಗೆ
ಮೂಡಲಿ ಎಲ್ಲೆಡೆ ಉಲ್ಲಾಸದ
ನವ ಪರ್ವ….
“ಶೋಭನ ನಾಮ” ಸಂವತ್ಸರವದು
ನಗುವಿನಲೆಗಳ ಮೇಲೆ
ಮರೆಸಲಿ ಕಹಿ ನೆನಪುಗಳ
ಸರಮಾಲೆ..
ಚೈತ್ರದ ಚಿಗುರಿನ ಹೊಸ ವರ್ಷ
ಆನಂದದ ಹೊಳೆ ಹರಸಲಿ
ಎಲ್ಲರ ಬದುಕಲಿ..
ನಿಲ್ಲದ ಪಯಣ ಸಾಗಲಿ
ಹೊಸ ಯುಗದ ಜೊತೆಗೆ
ರಮ್ಯತೆಯ ಭಾವದೊಳು
ಹಸಿರು ತೋರಣದಂತೆ….
ಪಯಣಿಸಲಿ ಬಾಳಿನ ಪಲ್ಲಕ್ಕಿ
“ಯುಗಾದಿ”ಯೊಳು ಸವಿಯುವ
ಬೇವು-ಬೆಲ್ಲದಂತೆ…..
————–[
–ಅಕ್ಷತಾ ಜಗದೀಶ.