ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಬುದ್ದನ ನೆಲದಲಿ ದಿಗ್ಗನೇ ಎದ್ದವರು..

ತಳವಾರು, ಕತ್ತಿ, ಕೋವಿಗಿಂತಲೂ
ಮಿಗಿಲಾಗಿ
ಬರೀ ನಾಲಿಗೆಯನು ನೆಲಕೆ ಚಾಚಿ
ನಂಜು ಕಾರಿದ ಪರಿಗೆ

ಬುದ್ದನ ನೆಲ ದಿಗ್ಗನೆ ಅದುರಿತು
ಜೀವಿಗಳು ನಡುಗಿದವು

ಜೀಗಿಯುವ ಮಂಗಾಟವಾಡುತ್ತ
ಅಲ್ಲಿ-ಇಲ್ಲಿ-ಎಲ್ಲೆಲ್ಲೂ
ಮೆರೆಯಲು ..
ಬುದ್ದನ ಭೂಮಿಯ ಕಂಪಿಸಲು ಹೊಂಚು ಹಾಕಿದವರು

ಸೌಹಾರ್ದ ಮಣ್ಣಿನೊಲುಮೆಯಲ್ಲಿ ಮತಾಂಧತೆಯ ಬೀಜ ಬಿತ್ತಲು ಬಂದು
ಬುದ್ದನಿಗೆ ಬದ್ದರಾಗದವರು

ಇವರು…

ಬಡವರ
ಬೆವರಿನ ಅನ್ನ ಕಸಿದುಕೊಂಡು ಕಾರ್ಪೋರೇಟ್ ಜಾಲಕ್ಕೆ ಜೋತು ಬಿದ್ದುವರು..

ಬುದ್ದನ ನೆಲದೊಳಗೆ
ಗುದ್ದಾಡಿದವರು

ಅಗೋ ನೋಡಲಿ ..
ಕೇಹೋ, ಕೇಹೋ ಕೇಕೆ ಹಾಕುತ್ತ

ಜೀವಿಗಳ ಸುಡಲು ಹಾತೊರೆಯುತಿರುವರು ..

ಬುದ್ದನ ಶಾಂತಿಯ ನೆಲದಲ್ಲಿ ಅಘೋರ ವಿಜೃಂಭಿತ ಮೆರೆವಣಿಗೆ ಹೊರಟಿಹರು …

ಕೇಸರಿ-ಬಿಳಿ-ಹಸಿರು-ನೇರಲೆ-ಕಂದು ಹಲವು ಬಣ್ಣಗಳ ನೆಲದಲಿ
ಕೆಂಪು ರಕ್ತದೋಕುಳಿಯಾಡಲು
ಹಪಹಪಿಸುತಿಹರು ..

ಅಬಲರ ಮೇಲೆ ಇವರ ದಾಳಿಯ ಮೇಲಾಟಕೆ
ನೆಲ ನಡುಗಿ ಹೋಗಿದೆ

ಮತ್ತೆ ಬಾಯಲ್ಲಿ ನೆಪಮಾತ್ರ
ಬುದ್ದ-ಬಸವ-ಅಂಬೇಡ್ಕರ್ ಧ್ಯಾನ ..


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

About The Author

2 thoughts on “”

  1. ಶೇಖರಗೌಡ ವೀ ಸರನಾಡಗೌಡರ್

    ಸತ್ಯದ ದರ್ಶನ ಅದ್ಭುತವಾಗಿದೆ.

Leave a Reply

You cannot copy content of this page

Scroll to Top