ಪಾರ್ವತಿ ಎಸ್ ದೇಸಾಯ್ ಕವಿತೆ-ಗಂತವ್ಯ

ಕಾವ್ಯ ಸಂಗಾತಿ

ಪಾರ್ವತಿ ಎಸ್ ದೇಸಾಯ್.

ಗಂತವ್ಯ

ತಂಬೂರಿ ಮೀಟುತ
ಅಂಬೆಯ ನೆನೆವಾತ
ಅಂಬಕತೆರೆಸೊ ನುಡಿ
ಕಂಬನಿ ದಾಟಿತ

ಕೋಳಿಕೂಗೊ ಮುನ್ನ
ಏಳುವುದು ಬಲುಚೆನ್ನ
ಒಪ್ಪ ಓರಣಿಸು ವಾಸದಿ
ತಪ್ಪದೆ ನೆಲೆಯನ್ನ

ಶುದ್ಧ ಮನದಿಕಾಯಕ
ಇದ್ದರಿಲ್ಲ ಸಾವೆ ಸನಿಕ
ಸಂಕಟದಿ ಸಹಾಯವು
ಲೇಸು ಮಹಾಯಾಗಕ

ಕಾಣದ ದೇವರಿಗೆ
ಕರ್ಜುರದ ನೈವೇದ್ಯ
ಹಸಿದು ಹಂಬಲಕೆ
ಮಿಕ್ಕುಳಿದನ್ನ ಯೋಗ್ಯ

ಕಂಡಲ್ಲಿ ಕೈಮುಗಿದು
ಹೊಡೆವ ಈಡುಗಾಯಿ
ತೃಷೆಯಿಂದ ಬಿಕ್ಕುವರ
ಬೆಂಡೆತ್ತಿ ಮಾಯ

ಅನ್ನಕೂ ಋಣಬೇಕು
ತನ್ನಡೆಗೆ ದೂಡಿದರು
ಮುನ್ನಡೆಗೆ ಬಾರದು
ಹುನ್ನಾರ ಹೂಡಿದರು

ಹಗೆ ಜಯಿಸುವಾ ಬಗೆ
ಮುಗುಳು ನಗೆಯಲಡಗಿ
ನುಡಿಯದೆ ಕೊಂಕನ್ನ
ಸುಧೆಹರಿಸೊ ಮಂಕಣ್ಣ

ಕೋವಿದತೆ ಮಿಗಿಲೇನು
ಎದೆಯ ಭಾವಕಿಂತ
ಸಮಾಧಾನವೆ ಸದ್ಗುಣ
ಬಾಧೆತೀರೊ ಗಂತವ್ಯಕೆ

ಮತ್ತಷ್ಟು ಬೇಕೆನ್ನದೆ
ಇರುವಷ್ಟು ಸುಖಿಸು
ತಪ್ತತೆಲಿ ಕೊರಗದೆ
ತೃಪ್ತತೆಯ ಹರಸು.


Leave a Reply

Back To Top