ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು

ನನ್ನೆದೆಯ ಉತ್ಪಲಿನಿಯಲಿ ಅರಳುವ ತೋಯಜವು ನೀನು
ನನ್ನೊಲವ ಧೀರ್ಘಿಕೆಯಲಿ ಹರಿಯುವ ಅರ್ಣವು ನೀನು
ಚಿತ್ತ ಭಿತ್ತಿಗಂಟಿದೆ ರಂಗು ರಂಗಿನ ನಿನ್ನ ನೆನಪುಗಳ ಚಿತ್ತಾರ
ಪ್ರೀತಿ ಪರಿಷೆಯಲಿ ದಾರ್ಷ್ಟ್ಯ ಮರೆವ ಸಮ್ಮೋದವು ನೀನು
ಹಸನು ಲಾಲಿತ್ಯದಲಿ ಪ್ರೇಮ ಶರವ ಹೂಡಿದ ಕಂದರ್ಪನಿವ
ಅಭೀಷ್ಟಗಳ ಸೌಷ್ಟವದಿ ಸುಷುಮೆಯಾದ ಉತ್ಕರ್ಷವು ನೀನು
ಸಮ್ಮೋಹನದಿ ಸರಸ ಗೈಯುತಿದೆ ಓಜಸ್ವಿಯಾದ ಅರ್ತಿಯು
ಭಾವ ಕ್ಷುಧೆಯನು ನೀಗಿಸುವ ಬತ್ತದ ಪೀಯೂಷವು ನೀನು
ಕೌಸ್ತುಭವಾಗಿ ಹೃದಯ ಸಿಂಹಾಸನವ ಅಲಂಕರಿಸು ಗೆಳೆಯ
ಅನೂಹ್ಯವಾದ ಅರ್ಚನಾಳ ಆರುಮೆಗೆ ಉದಂತವು ನೀನು

ಮೇಡಂ ಎಂತಹ ಅದ್ಭುತ ಪದಗಳನ್ನು ಬಳಸುತ್ತೀರ
ಖುಷಿಯಾಗುತ್ತೆ
ಕೆಲವು ಪದಗಳ ಅರ್ಥ ತಿಳಿವುದು ಹೇಗೇ
ಅದ್ಭುತವಾದ ಪದಗಳ ಸಮುಚ್ಚಯ