ಮಧುರಾ ಮೂರ್ತಿಕವಿತೆ-ಆತ್ಮದ ಗೋಳು

ಕಾವ್ಯಸಂಗಾತಿ

ಆತ್ಮದ ಗೋಳು

ಮಧುರಾ ಮೂರ್ತಿ

ಮಧುರಾ ಮೂರ್ತಿ: ಇದ್ದಾಗ ಬಂದು ಮಾತಾಡದ ಬಂಧುಗಳು
ಸತ್ತವನೆದುರು ನಿಂತು ಬಿಕ್ಕುತಿಹರು
ಆತ್ಮೀಯತೆ ತೋರದವರೆಲ್ಲ ಇಂದು
ಚರಣಗಳಿಗೆರಗುತ್ತ ಹೋಗುತಿಹರು

ಊರವರ ಸಲಹೆಯ ದಿಕ್ಕರಿಸಲಾಗದೇ
ಕಟ್ಟಿದರು ಚಟ್ಟವನು ಹೊತ್ತೊಯ್ಯಲು
ಚಿತೆಯಲ್ಲಿ ಮಲಗಿಸಿ ಕೊಳ್ಳಿಯಿಟ್ಟರು
ಸಿದ್ದರಾದರು ತಮ್ಮ ಕನಸುಗಳ ಪಡೆಯಲು

ವಿಧಿವಿಧಾನ ಮುಗಿಸುವಾ ಮೊದಲಲ್ಲೇ
ಆಸ್ತಿ ಹಂಚಿಕೆಗಾಗಿ ಕಲಹ ಮಕ್ಕಳಲ್ಲಿ
ತೊರೆದವನು ತಂದೆಯೆಂಬ ಅರಿವಿಂದ
ಕಾಣದಾಯ್ತು ಬೇಸರ ಮೊಗದಲಿ

ಎಂತಹ ಮಕ್ಕಳಿಗೆ ಜನ್ಮವನು ನೀಡಿದೆ
ಮಕ್ಕಳಭ್ಯುದಯಕೆ ಬದುಕೆಲ್ಲ ಸವೆದೆ
ಕಿಂಚಿತ್ತು ಗೌರವ ಕೊಡಲಿಲ್ಲ ಕೊನೆಗೆ
ಸತ್ತಾಗ ಬರಿ ಬೂದಿ ಬೆಲೆಯೆಂದು ತಿಳಿದೆ


Leave a Reply

Back To Top