ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ಧಾರಾವಾಹಿ
ಕವನಗಳು ಆಗೆಲ್ಲ ಕನಸುಗಳು
ತಿದಿ ಒತ್ತಿದ ಕುಲುಮೆಗಳು
ಹುಲ್ಲು ಹಾಸಿನ ಮೇಲೆ ಬರೆ ಬರೇ ನಗ್ನ ಗುಲಾಬಿ ಕಲೆಯ
ಪುವಾಸನೆ !
ಆಗೆಲ್ಲ ಬರೆದ ಕವನ
ಕಥೆಯಾದ
ವ್ಯಥೆಯಾಗಲೇ ಇಲ್ಲ!
ಈಗೆಲ್ಲ ಬದುಕಿದಂತೆಲ್ಲ
ಜೀವನ ತದುಕಿದಂತೆಲ್ಲ
ಕವಿತೆ ಮೈ ತಳೆದು
ಹೊಳೆ ಹೊಳೆವ ಭಾವ
ಗಡುಸಾಗಿ ಮುನ್ನಡೆದು
ಜೀವನದ
ಜೀರ್ಣೋದ್ಧಾರ!!
ಪ್ರೇಯಸಿ,ಆಗೆಲ್ಲ
ಕವನದಲ್ಲಷ್ಟೆ ಊರ್ವಶಿ
ಕಥೆಯಾದ ಕನಸಿ
ವ್ಯಥೆಯಾಗುವ ಮುನ್ನ
ಅಳಿಸಿ ಹೋಗುವ ಮಾನಸಿ!
ಕನಸೊಡೆದು ಚೂರಾಗಿ
ನನಸಲ್ಲಿ ನಲ್ಲೆ
ಹೃದಯದಾಳಕ್ಕಿಳಿದು
ಕನಸ ಮರೆಸಿ ಇಂದಿಗೂ
ಸುದೀರ್ಘ!
ಕಥೆಯಂತಲ್ಲ-
ಧಾರಾವಾಹಿ!!
ಡಾ ಡೋ.ನಾ.ವೆಂಕಟೇಶ
One thought on “ಡಾ ಡೋ.ನಾ.ವೆಂಕಟೇಶ ಕವಿತೆ-ಧಾರಾವಾಹಿ”