ಕಾವ್ಯ ಸಂಗಾತಿ
ಡಾ.ನಿರ್ಮಲಾ ಬಟ್ಟಲ
ಕಲ್ಲಾದ ಪಾದಗಳು
ಆರಂಭವಾಗಿದೆ ನನ್ನ ಪಯಣ
ಮನುಸ್ಮೃತಿ ಹಾದಿಯಿಂದ
ಹೊರಟಿದ್ದೆನೆ ನಾನು ಅದೇ
ಹಳೆಯ ಜಾಡುಹಿಡಿದು….!
ರಾಮಾಯಣ ಮಹಾಭಾರತ
ಪುರಾಣ ಪುಣ್ಯಕಥೆಗಳಲ್ಲಿ
ಪಾತ್ರ ನಿರ್ವಹಿಸಿದರಲ್ಲ
ಸೂತ್ರಧಾರ ಅಣತಿಯಂತೆ ..
ಹೊರಟಿರುವೆ ಅದೇ ದಾರಿಯಲಿ
ಎಷ್ಟೆ ಪ್ರಯತ್ನಿಸಿದರೂ
ಹೊಸ ಹಾದಿಯಲಿ ನನ್ನ ಹೆಜ್ಜೆ
ಗುರುತುಗಳು ಮೂಡುತಿಲ್ಲ….
ಅಹಲ್ಯೆ ಅಸಹಾಯಕಪತ
ಸೀತೆಯದು ಅಗ್ನಿಪತ
ಒಬ್ಬಳು ಕಲ್ಲಾದವಳು
ಒಬ್ಬಳು ಕರಕಲಾಗದವಳು
ಮಣಭಾರ ಮೌಲ್ಯಗಳ ಹೊರೆಸಿ
ಕುಗ್ಗಿಸಿ ಬಗ್ಗಿಸಿ ಸಿಡಿದೆಳದಂತೆ
ತ್ಯಾಗದ ಪಟ್ಟಗಟ್ಟುತ್ತಾರೆ
ಮತ್ತದೇ ದಾರಿ ಬೆರಳುತೋರುತ್ತಾರೆ
ನಿರಂತರದ ವಿರೋಧಿಗಳು
ಹೊಸ ಹೆಜ್ಜೆಗೆ, ಎದುರಿಸಲು ಸಿದ್ಧ
ನನ್ನ ಪಾಲು ಎನಿದೆಯೊ ಗೊತ್ತಿಲ್ಲ
ಶಾಪವೊ ಅಗ್ನಿ ಪರೀಕ್ಷೆಯೊ
ಬೀದಿಯಲಿ ಬಿರಿದು ನಿಂತು ಪಾರಿಜಾತದ ಚೆಲುವಿಗೆ ಸೊಲುತ್ತೆನೆ
ನಡೆವ ದಾರಿಗೆ ನೋವು ಕೊಡುವ
ತುಳಿದ ಮುಳ್ಳಿಗೂ ಕ್ಷಮಿಸುತ್ತೇನೆ
ಸ್ತುತಿಗೆ ಪ್ರೀತಿಗೆ ಮೈಮರೆತು
ಹತ್ತು ಪಾತ್ರಗಳಿಗೆ ಮತ್ತೆ ಬಣ್ಣ ಹಚ್ಚಿ ಸೊಲುತ್ತೇನೆ
ಮುತ್ತದೆ ಪಡಿಯಚ್ಚಿನಲಿ ಎರಕ ಹ್ಯೊದಾಗ ನಲುಗುತ್ತೇನೆ
ಮುಗಿಯದ ಪಯಣದ
ಹಾದಿಯ ಹೆಜ್ಜೆಗಳು ಸವೆಯುತ್ತಿವೆ
ಕಲ್ಲಾದ ಪಾದಗಳು ನೋಯುತ್ತಿವೆ.
ಶತಮಾನಗಳಿಂದಲೂ….
ಒಮ್ಮೊಮ್ಮೆ ರಾಮ ರಾವಣರೂ
ಇನ್ನೊಮ್ಮೆ ಕೃಷ್ಣ ಕೀಚಕರು
ಭೇಟಿಯಾಗುತ್ತಲೇ ಇದ್ದಾರೆ
ಈಗೀಗ ಮಾರುವೇಷದಲ್ಲಿ
ಡಾ.ನಿರ್ಮಲಾ ಬಟ್ಟಲ
Beautiful poem
ಹೌದು, ನಿರ್ಮಲಾ ಮೇಡಮ್ . ವಾಸ್ತವವಾಗಿದೆ ಕವಿತೆ
It indicates Reality mam
Marvellous poem
Marvellous poem
very nice.
Very nice poem
ವಾಸ್ತವತೆಗೆ ಹಿಡಿದ ಕನ್ನಡಿ
ವೈಚಾರಿಕ ವಿಚಾರಗಳು ಮೌಲ್ಯಗಳ ಹುಡುಕಾಟ
Good poem